ಭೖರನಹಟ್ಟಿ ಮಠದಲ್ಲಿ ‘ಸ್ವಾಭಿಮಾನಿ ಕನ್ನಡಿಗರು’ ಉಪನ್ಯಾಸ ಸರಣಿ ಉದ್ಘಾಟನೆ

ನರಗುಂದ :

ಕನ್ನಡದ ಅಸ್ಮಿತೆ ಮತ್ತು ಸ್ವಾಭಿಮಾನದ ಜಾಗೃತಿಗೆ ‘ಸ್ವಾಭಿಮಾನಿ ಕನ್ನಡಿಗರು’ ಉಪನ್ಯಾಸ ಸರಣಿ ಮುನ್ನುಡಿಯಾಗಲಿ. ಕನ್ನಡ ಭಾಷೆ, ನಾಡು-ನುಡಿಯ ಅಭಿಮಾನ ಬೆಳೆಸುವ ನಿಟ್ಟಿನಲ್ಲಿ ಭೈರನಹಟ್ಟಿ ಶ್ರೀಮಠ ಪ್ರತಿವರ್ಷ ವಿನೂತನ ವಿಚಾರಗಳೊಂದಿಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿರುವುದು ಕನ್ನಡಾಭಿಮಾನದ ಸಂಕೇತವಾಗಿದೆ ಎಂದು ಹಾವೇರಿ ಸಿಂದಗಿಮಠದ ಸಂಚಾಲಕರಾದ ಶ್ರೀ ಶಿವಬಸಯ್ಯನವರು ಆರಾಧ್ಯಮಠ ಅವರು ಬಣ್ಣಿಸಿದರು.

ತಾಲೂಕಿನ ಭೖರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಭಿಮಾನಿ ಕನ್ನಡಿಗರು ಉಪನ್ಯಾಸ ಸರಣಿ-2026’ರ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ನೆಲ-ಜಲ ಹಾಗೂ ಕನ್ನಡಿಗರ ಸ್ವಾಭಿಮಾನದ ಕುರಿತು ನಾಡಿನ ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ಚಿಂತಕರಿಂದ ಉಪನ್ಯಾಸಗಳನ್ನು ಆಯೋಜಿಸುವ  ಮೂಲಕ ಕನ್ನಡ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೈಂಕರ್ಯ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಸಾನಿದ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಸಮಕಾಲೀನ ಸವಾಲುಗಳ ಕುರಿತು ಗಂಭೀರ ಚರ್ಚೆ ನಡೆಸುವ ವೇದಿಕೆಯಾಗಿ ರೂಪಿಸಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ಕನ್ನಡಿಗರಾಗಿರುವುದಕ್ಕೆ ಹೆಮ್ಮೆಪಡುವುದರ ಜೊತೆಗೆ ದೈನಂದಿನ ಬದುಕಿನಲ್ಲಿ ಕನ್ನಡವನ್ನು ಬಳಸುವ, ಕನ್ನಡದ ನೆಲ-ಜಲ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರಾರ ಜಿ.ಎಸ್. ಭಟ್, ಶಿವಯೋಗಿ ಹಿರೇಮಠ, ಹಾವೇರಿಯ ವೀರಣ್ಣ, ಮಹಾಂತೇಶ ಹಿರೇಮಠ, ಬಸಪ್ಪ ಸಂಗಳದ, ಹನಮಂತ ಐನಾಪೂರ ಪ್ರಮುಖರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *