ಸ್ವಾಭಿಮಾನಕ್ಕೆ ಬೇಕು ಕಾಯಕಶ್ರದ್ಧೆ, ದಾಸೋಹಪ್ರಜ್ಞೆ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಸಾಣೇಹಳ್ಳಿ :

ಇನ್ನೊಬ್ಬರ ಹಂಗಿಗೆ ಒಳಗಾಗದೆ, ಬೇಡದೆ ಬದುಕುವುದು ಸ್ವಾಭಿಮಾನ. ಹಾಗೆಯೇ ಕಾಯಕಶ್ರದ್ಧೆ ಮತ್ತು ದಾಸೋಹಪ್ರಜ್ಞೆಯಿದ್ದಾಗ ಸ್ವಾಭಿಮಾನಿಯಾಗಿ ಬದುಕಲು ಸಾಧ್ಯ ಎಂದು ಪೂಜ್ಯ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದರು.

ನಾಟಕೋತ್ಸವ ಅಂಗವಾಗಿ ಇಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆತ್ಮವಿಶ್ವಾಸವಿದ್ದರೆ ಸಾಮರ್ಥ್ಯ ಹಾಗೂ ಕೌಶಲ ಹೆಚ್ಚುತ್ತದೆ. ಅಚಲ ನಂಬಿಕೆ ಇಟ್ಟುಕೊಂಡು ಬದುಕು ಕಟ್ಟಿಕೊಂಡರೆ ಆತ್ಮವಿಶ್ವಾಸ. ದೇಶ, ಭಾಷೆ, ಸಂಸ್ಕೃತಿ, ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟುಕೊಳ್ಳುವುದು ಒಳಿತು. ಹಾಗೆಯೇ ನಮ್ಮ ಗೌರವಕ್ಕೆ, ಘನತೆಗೆ ಧಕ್ಕೆ ಬಾರದ ಹಾಗೆ, ನಮ್ಮ ಸ್ವಂತ ಕಾಲ ಮೇಲೆ ನಿಲ್ಲುವುದು ಸ್ವಾಭಿಮಾನ ಎಂದು ತಿಳಿಸಿದರು.

ಸ್ವಾರ್ಥ, ತತ್ವರಹಿತ ಜೀವನ, ಅನೈತಿಕ ವ್ಯವಹಾರ ಬದಲಾಗಬೇಕಾದರೆ ಪ್ರಾಮಾಣಿಕತೆ, ಛಲ ಇದ್ದರೆ ಸ್ವಾಭಿಮಾನಿಗಳಾಗಲು ಸಾಧ್ಯ. ಸ್ವಾಭಿಮಾನದ ಬದುಕು ನಡೆಸುವವರು ಸುಖಿಗಳಾಗಿರುತ್ತಾರೆ ಜೊತೆಗೆ ಇತರರು ಸುಖಿಗಳಾಗಲು ನೆರವಾಗುತ್ತಾರೆ ಎಂದರು.

ಇದಕ್ಕೂ ಮೊದಲು ಸ್ವಾಭಿಮಾನ ಕುರಿತು ಹೊಸದುರ್ಗದ ಉದ್ಯಮಿ ಪ್ರದೀಪ ಅವರು ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟು ಉಣಿಸುವುದನ್ನು ಬಿಟ್ಟು, ಓದಿಸಲು ಒತ್ತು ಕೊಟ್ಟಾಗ ಮಕ್ಕಳು ಸ್ವಾಭಿಮಾನಿಗಳಾಗಲು ಸಾಧ್ಯ ಎಂದರು.

ಶಿವಸಂಚಾರ ಕಲಾವಿದರಾದ ನಾಗರಾಜ, ಜ್ಯೋತಿ ಹಾಗೂ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *