ಮೇ 3 ವಚನ ನೃತ್ಯ ಸ್ಪರ್ಧೆಗಾಗಿ ಅರ್ಜಿ ಆಹ್ವಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ :

ವಚನ ಚಾರಿಟೇಬಲ್ ಸೊಸೈಟಿ ವತಿಯಿಂದ ಮೇ ೦೩, ೨೦೨೬ ರಂದು ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಚನ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಬೀದರ ಜಿಲ್ಲೆಯ ೧೫ ವರ್ಷ ಮೇಲ್ಪಟ್ಟ ಮಕ್ಕಳ ಕಲಾವಂತಿಕೆಗೆ ಪ್ರೋತ್ಸಾಹಿಸಲು ಈ ವಚನ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಥಮ ಬಹುಮಾನ ೧೦,೦೦೦/- ದ್ವೀತಿಯ ಬಹುಮಾನ ೬,೦೦೦/- ತೃತೀಯ ಬಹುಮಾನ ೩,೦೦೦/- ಕೊಡಲಾಗುವುದು. ಪಾಲ್ಗೊಳ್ಳುವ ಪ್ರತಿಯೊಬ್ಬರಿಗೆ ಪ್ರಮಾಣ ಪತ್ರ ನೀಡಲಾಗುವುದು.

ಪಾಲ್ಗೊಳ್ಳುವ ಸ್ಪರ್ಧಾಳುಗಳಿಗೆ ಈ ಕೆಳಕಂಡ ನೀತಿ ನಿಯಮ ಅಳವಡಿಸಲಾಗಿದೆ.

ಬೀದರ ಜಿಲ್ಲೆಯ ಮಕ್ಕಳಿಗಾಗಿ ಮಾತ್ರ ಮುಕ್ತ ಅವಕಾಶ. ಒಂದು ತಂಡದಲ್ಲಿ ಕನಿಷ್ಠ ಐದು ಗರಿಷ್ಠ ಹತ್ತು ಜನ ಇರತಕ್ಕದ್ದು. ಪ್ರತಿತಂಡಕ್ಕೆ ರೂ. ೫೦೦/- ಹೋಗಿ, ಬರುವ ಪ್ರಯಾಣ ಭತ್ಯೆ ನೀಡಲಾಗುವುದು.

ಪ್ರತಿ ತಂಡಕ್ಕೆ ೫ ನಿಮಿಷಗಳು ಕಾಲಾವಕಾಶ ಮಾತ್ರ ಕಲ್ಪಿಸಲಾಗುತ್ತದೆ. ಹನ್ನೆರಡನೆಯ ಶತಮಾನದ ಶರಣರ ವಚನಗಳ ಆಧಾರಿತ ನೃತ್ಯ ತಯಾರಿ ಮಾಡಿಕೊಂಡು ಪೆನ್‌ಡ್ರೈವ್ ತಾವೇ ತರಬೇಕು.

ಇಚ್ಛೆಯುಳ್ಳ ತಂಡದವರು ಎಪ್ರಿಲ್ ೩೦ರೊಳಗಾಗಿ ರೇವಣಸಿದ್ದಪ್ಪ ೯೯೭೨೬೭೭೫೦೮ ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ವಚನ ಚಾರಿಟೇಬಲ್ ಸೊಸೈಟಿ‌ ಅಧ್ಯಕ್ಷರಾದ ಡಾ. ಶಿವಶಂಕರ ಟೋಕರೆ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *