ನಾಗನೂರು ಸ್ವಾಮೀಜಿ ಅನುವಾದ ಮಾಡಿದ್ದು ಕುರಾನ್ ಅಲ್ಲ ವಿನೋಬಾ ಭಾವೆ ಕೃತಿಗಳನ್ನು
ರಬಕವಿ ಬನಹಟ್ಟಿ
ಬನಹಟ್ಟಿಯ ಕಾರ್ಯಕ್ರಮವೊಂದರಲ್ಲಿ ಶನಿವಾರ ಕನ್ನೇರಿ ಸ್ವಾಮಿ ‘ನಾಗನೂರು ಮಠದ ಸ್ವಾಮೀಜಿ ಕುರಾನ್ ಅನುವಾದ ಮಾಡಿದ್ದಾರೆ’ ಎಂದು ಹೇಳಿರುವುದು ಅಪ್ಪಟ ಅಜ್ಞಾನದ ಪರಮಾವಧಿಗೆ ನಿದರ್ಶನವಾಗಿದೆ.
ನಾಗನೂರು ಸ್ವಾಮೀಜಿ ಯಾವುದೇ ಭಾಷೆಯ ಕುರಾನ್ ಗ್ರಂಥವನ್ನು ಅನುವಾದ ಮಾಡಿಲ್ಲ. ಜನರಲ್ಲಿ ಇಂತಹ ಹಸಿ ಸುಳ್ಳುಗಳನ್ನು ಹೇಳಿ, ಹಿಂದೂ ಧರ್ಮದ ಯುವಕರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕನ್ನೇರಿ ಸ್ವಾಮಿಯ ದುಷ್ಟಬುದ್ಧಿಗೆ ಏನು ಹೇಳಬೇಕೋ ತಿಳಿಯದು.
ನಾಗನೂರು ಸ್ವಾಮೀಜಿ ಅನುವಾದ ಮಾಡಿದ್ದು ಸಂತ ವಿನೋಬಾ ಭಾವೆ ಅವರ ಕೃತಿಗಳನ್ನು. ಪವನಾರ ಆಶ್ರಮದಲ್ಲಿದ್ದ ಚನ್ನಮ್ಮ ಹಳ್ಳಿಕೇರಿ ಅವರು ಶ್ರೀಗಳ ಸನ್ನಿಧಿಗೆ ಬಂದು ಸಂತ ವಿನೋಬಾ ಭಾವೆ ಅವರ ಸಾಹಿತ್ಯ ಒಂದಿಷ್ಟು ಕನ್ನಡಕ್ಕೆ ಬರಬೇಕಾಗಿದೆ. ಹಿಂದಿ ಭಾಷೆಯಲ್ಲಿ ಪ್ರಭುತ್ವ ಇರುವ ತಾವು ಒಂದಿಷ್ಟು ಅನುವಾದ ಮಾಡಿಕೊಡಿ ಎಂದು ವಿನಂತಿಸಿಕೊಂಡಿದ್ದರು.
ಅವರ ವಿನಂತಿ ಮನ್ನಿಸಿ ಪೂಜ್ಯ ಸ್ವಾಮೀಜಿ ‘ಭಕ್ತಿದರ್ಶನ’ ಎಂಬ ಕೃತಿಯನ್ನು ಅನುವಾದ ಮಾಡಿಕೊಟ್ಟರು. ಅದು ತುಂಬ ಜನಪ್ರಿಯವಾಯಿತು. ನಂತರ ವಿನೋಬಾ ಅವರ ‘ಧರ್ಮಾಮೃತ’ ಎಂಬ ಕೃತಿಯನ್ನು ಅನುವಾದ ಮಾಡಿದ್ದರು. ಈ ಕೃತಿಯ ಮೌಲಿಕತೆಯನ್ನು ಗಮನಿಸಿ ನಮ್ಮ ನಾಡಿನ ಖ್ಯಾತ ವಿದ್ವಾಂಸರಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ತಮ್ಮ ಅನನ್ಯ ಪ್ರಕಾಶನದ ಮೂಲಕ ಪ್ರಕಟಿಸಿದರು.
ಧರ್ಮಾಮೃತ ಕೃತಿಯಲ್ಲಿ ವಿನೋಬಾ ಅವರು ಹಿಂದೂ ಧರ್ಮದ ವೈಶಿಷ್ಟ್ಯಗಳನ್ನೇ ಸಾರಿದ್ದಾರೆ. ಇದು ಕನೇರಿ ಸ್ವಾಮಿಗಳ ಕಣ್ಣಿಗೆ ಕಾಣುವುದಿಲ್ಲವೆಂದು ತೋರುತ್ತದೆ. ಕೊನೆಯಲ್ಲಿ ವಿನೋಬಾ ಅವರ ‘ಇಸ್ಲಾಂ ಧರ್ಮದ ಸಂದೇಶ’ ಎಂಬ ಕೃತಿಯನ್ನು ಶ್ರೀಗಳು ಅನುವಾದಿಸಿದರು.
ಇನ್ನೂ ಒಂದು ಆಶ್ಚರ್ಯದ ಸಂಗತಿಯೆಂದರೆ- ಈ ಕೃತಿಯನ್ನು ಕನ್ನೇರಿ ಸ್ವಾಮಿಯ ಪರಮಾರಾಧ್ಯ ಗುರುಗಳಾದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರೇ ಬೆಳಗಾವಿಯಲ್ಲಿ ಲೋಕಾರ್ಪಣೆ ಮಾಡಿದ್ದರು. ಇದು ಅವರಿಗೆ ಗೊತ್ತಿರುವ ಸಂಗತಿಯೇ. ಹೀಗಿದ್ದೂ ಹಿಂದೂ ಯುವಕರ ಮನಸ್ಸನ್ನು ಕೆಡಿಸುವ ಹುಚ್ಚಾಟಕ್ಕೆ ನಾಗನೂರು ಸ್ವಾಮೀಜಿ ಕುರಾನ್ ಅನುವಾದಿಸಿ ಹಂಚಿದ್ದಾರೆ ಎಂದು ಹಸಿ ಸುಳ್ಳನ್ನು ಹೇಳಿರುವುದು ಅವರ ದುಷ್ಟ ಮನಸ್ಥಿತಿಗೆ ಹಿಡಿದ ಕನ್ನಡಿ ಎನ್ನಬೇಕು.
ನಾಗನೂರು ಸ್ವಾಮೀಜಿ ಭಾರತೀಯ ತತ್ವಶಾಸ್ತ್ರ ಎಂಬ ಹಿಂದೂ ಧರ್ಮದ ಭಾಗದಲ್ಲಿಯೇ ಬರುವ ಸಮಸ್ತ ಷಡ್ದರ್ಶನಗಳ ಸಮಗ್ರ ಅವಲೋಕನ ಕೃತಿಯನ್ನು ಅನುವಾದ ಮಾಡಿದ್ದಾರೆ. ಈ ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿಯೂ ಲಭಿಸಿದೆ. ಹಿಂದೂ ಧರ್ಮದ ಅಪೂರ್ವ ಚಿಂತಕರಾದ ಸೂರ್ಯಪ್ರಕಾಶ ಪಂಡಿತ ಅವರೇ ಈ ಕೃತಿಯ ವೈಶಿಷ್ಟ್ಯ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ಒಂದು ಸುದೀರ್ಘ ಲೇಖನವನ್ನೂ ಬರೆದಿದ್ದಾರೆ. ಇದು ಕನ್ನೇರಿ ಸ್ವಾಮಿಗೆ ಕಾಣುವುದಿಲ್ಲ.
ಕನ್ನೇರಿ ಸ್ವಾಮಿ ಇಂತಹ ಹಸಿಸುಳ್ಳುಗಳನ್ನು ಹೇಳುವುದನ್ನು ಬಿಟ್ಟು, ನಿಜವಾದ ಹಿಂದೂ ಧರ್ಮದ ತತ್ವಗಳನ್ನು ಯುವ ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಲಿ, ಕೋಮು ಭಾವನೆಯ ಕಿಚ್ಚಿನಲ್ಲಿ ಮೈ ಕಾಯಿಸಿಕೊಳ್ಳುವ ಮನೋಸ್ಥಿತಿಯಿಂದ ಹೊರಬರಲಿ ಎಂದು ಆಶಿಸುವೆ.

ಇಂತಹ ಮನೋಸ್ಥಿತಿಯ ಭಂಡರಿಗೆ ತಕ್ಕಬುದ್ದಿ ಕಲಿಸಬೇಕು, ಉದಾಸೀನಮಾಡಿ ಬಿಡುವುದರಿಂದ ಹದ್ದುಮೀರಿ ಮಾತನಾಡಲು ಹೇಸುವುದಿಲ್ಲ.. ಶಾಸ್ತಿಮಾಡಲೇಬೇಕು.
True
ಲಿಂಗಾಯತ ಧರ್ಮದ ಕಾನ್ಹೆರಿ ಮಠಕ್ಕೆ ಇವರು ಒಂದು ಕಳಂಕ.
ಇವರು ದನಗಳ ಮಲ ಮೂತ್ರ ಮಾರಿ ದುಡ್ಡು ಗಳಿಸಿದ್ದಾರೆ.
ಆ ದುಡ್ಡಿನಲ್ಲಿ ಉಚಿತ ಗುರುಕುಲ ನಡೆಸುತ್ತಾರೆ, ಅಲ್ಲಿ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವಿದ್ಯೆ ಕಲಿಸುವುದಿಲ್ಲ.
ಆ ದುಡ್ಡನ್ನು ಲಿಂಗಾಯತ ಧರ್ಮದ ಅಪಪ್ರಚಾರ ಮಾಡುವುದಕ್ಕೆ ಖರ್ಚು ಮಾಡುತ್ತಾರೆ.
ದುಡ್ಡಿನ ಮದ, ಅಹಂಕಾರ ಅನ್ನಬಹುದೇ?
ಇವನು ತಿಪ್ಪರಲಾಗ ಹಾಕಿದರೂ ಬಸವ ಧರ್ಮ ಇದು, ಹಿಂದೂ (ವೈದಿಕ ) ಧರ್ಮ ಆಗೋದಿಲ್ಲ. ಕರ್ನಾಟಕ ದಲ್ಲಿ ಇವನಂಥ ಹುಂಬ ಸ್ವಾಮಿ ಇನ್ನೊಬ್ಬರು ಸಿಗೋದಿಲ್ಲ. ಹುಚ್ಚ ನಾಯಿ ಬೊಗಳಿದಂತೆ ಬೊಗಳಿದರೆ ಯಾರೂ ಕೇಳುವುದಿಲ್ಲ. ಕೇಳಿದರೂ ಇತಿಹಾಸ ಗೊತ್ತಿಲ್ಲದ ಜನ ಚಪ್ಪಾಳೆ ತಟ್ಟತಾರೆ. ಅಷ್ಟೇ.
True
ಕಣ್ಣೀರಿ ಸ್ವಾಮೀಜಿಗಳಿಗೆ ಪುಕಸಟ್ಟಿ ಪ್ರಚಾರ ಬೇಕಾಗಿದೆ ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ
First time when Kanneri Swamiji coined the term Lingayat Talibanij Shocked to hear whom he has targeted then only I wanted to say my words but my conscience stopped but afterwards the language used as a Swami ji little bit painful I felt but I think Swamiji when he made the statement about the I.A.S. retired crossed the limits.Now I want to say that though I am not from the community now what the subject put before the government and also the public that Lingayat religion is in itself The Separate Independent religion like Jain, Buddha and Sick etc and it is Independent religion is clarified which many Vacha as prove the same.It is clear that Basavanna one of great thinker and serve of humans uplifting the neglected perhaps the most important class of workers who are the base for the survival of the human beings which was neglected totally only in the practice of heavenly thought s which is the history all together side lining the so called traditions of society putting forth new thoughts which was appreciated and accepted without any dissemination.The thought of separate identity which was not put forth now High lighted and put forth the demand for separate identity what wrong is in it?It is for the welfare and benefits of the community.I firmly state that what thoughts Basavanna taught are new and separately ideal to be called as Lingayat Religion having its own seprate identity it is not oppose or any other thing.
ಕನ್ನೇರಿ ಸ್ವಾಮಿ ಹೇಳಿದ್ದಕ್ಕೆ , ನಾಗನೂರು ಸ್ವಾಮಿಗಳು ಪ್ರತಿಕ್ರಿಯೆ ನೀಡಲಿ. ನಮ್ಮ ಯಾವ ಪ್ರತಿಕ್ರಿಯೆಗಳಿಗೆ ಬೆಲೆ ಇರುವುದಿಲ್ಲ.
ಪೂಜ್ಯ ಸಿದ್ದರಾಮ ಗುರುಗಳ ಪುಸ್ತಕಗಳು ನನ್ನ ಬಳಿ ಇವೆ. ಧರ್ಮ, ತತ್ವ, ಸಿದ್ದಾಂತ, ಇತಿಹಾಸ ಮುಂತಾದ ವಿಷಯಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ದೊಡ್ಡ ಪಾಂಡಿತ್ಯ ಸಾಧಿಸಿದ್ದಾರೆ. ಎಂದೂ ತಮ್ಮ ವಿದ್ವತ್ತನ್ನು ಪ್ರದರ್ಶಿಸಿಲ್ಲ ಹಾಗೂ ತಮ್ಮ ಸ್ಥಾನವನ್ನು ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ಇಂಥವರ ಬಾಯಿಗೆ ಬೀಗ ಹಾಕಿ ನಮ್ಮ ಇಡೀ ಹೋರಾಟವನ್ನು ಹತ್ತಿಕ್ಕುವ ಸಂಚು ನಡೆಯುತ್ತಿದೆ. ಶರಣ ಬಾಂಧವರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಲಿಂಗಾಯತರಲ್ಲಿ ಜಾಗೃತಿ ಮೂಡಿಸಲು ಹಗಲಿರುಳು ಸಂಬಳವಿಲ್ಲದೆ ದುಡಿಯುತ್ತಿರುವ ಕಾಡಸಿದ್ದೇಶ್ವರ ಪೂಜ್ಯರಿಗೂ ಅವರ ಹಿಂದೆ ನಿಂತು ವೀರಾವೇಶದಿಂದ ಹೋರಾಡುತ್ತಿರುವ ಪುಕ್ಕಲರಿಗೂ ಅನಂತ ಅನಂತ ವಂದನೆಗಳು. ಜೈ ಬಸವ
ಕನ್ನೇರಿ ಸ್ವಾಮಿಗೆ ಮಠಾಧೀಶರು ಅವತ್ತೆ ಬುದ್ಧಿ ಕಲಿಸಿದ್ದರೆ ಇಂದು ಈ ಮಾತುಗಳು ಕೇಳಿಬರುತ್ತಿರಲ್ಲಿಲಾ ಇವರಿಗೆ ಸೂ ಮಕ್ಕಳು ಅಂದರು ಸುಮ್ಮನೆ ಕುಂತುರು ಇವತ್ತು ಮತ್ತೆ ಎಲ್ಲರನ್ನೂ ಹಮ್ಮಾಕ್ಕಾತ್ತಾ ಈಗಲಾದರೂ ಎಚ್ಚೆತ್ತುಕೊಂಡು ಅವನಿಗೆ ಬುದ್ಧಿ ಕಲಿಸಬೇಕು ಎಂದು ಕೇಳಿಕೊಳ್ಳುತ್ತೇನೆ
ಕೆಣಕಬಾರದನ್ನ ಕೆಣಕಿದ್ದಾರೆ ಕನ್ನೇರಿ ಗ್ಯಾಂಗ್ . ಇವರು ಇಷ್ಟೆಲ್ಲಾ ಒದರಾಡ್ತಿರೋದು ಚುನಾವಣೆಯಲ್ಲಿ ಸೋಲುವ ಭೀತಿಯಿಂದ. ನಾವೂ ಅಲ್ಲೇ ಇವರಿಗೆ ಬುದ್ದಿ ಕಲಿಸಬೇಕು