ಹಿಂದೂ ಸಮಾವೇಶದಲ್ಲಿ ಕೋಮುದ್ವೇಷ ಭಾಷಣ ಮಾಡಿದ ಕನ್ನೇರಿ ಸ್ವಾಮಿ

ಚಿಂತಕಿ ಮೀನಾಕ್ಷಿ ಬಾಳಿ ನಿಂದನೆ; ನಿಷ್ಕ್ರಿಯ ಜಿಲ್ಲಾಡಳಿತ

ಗದಗ

ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಗಳು ವಿಜಯಪುರದ ಜಿಲ್ಲೆಯ ಶಾಂತಿ, ಸೌಹಾರ್ದತೆ ಹಿತದೃಷ್ಟಿಯಿಂದ ಈ ಕನ್ನೇರಿ ಸ್ವಾಮಿಯನ್ನು ಜಿಲ್ಲೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಈ ನಿರ್ಬಂಧ ಆದೇಶವನ್ನು ಪ್ರಶ್ನಿಸಿ ಕನ್ನೇರಿ ಸ್ವಾಮೀಜಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಕನ್ನೇರಿ ಸ್ವಾಮೀಜಿಗೆ ಒಬ್ಬ ಸ್ವಾಮೀಜಿ ಆದಂತವರ ಭಾಷೆ ಮಿತದಲ್ಲಿರಬೇಕು, ಅಶ್ಲೀಲ ಹಾಗೂ ಯಾವ ಸಮುದಾಯಕ್ಕೂ ಅವಹೇಳನಕಾರಿ ಮಾತುಗಳನ್ನು ಆಡಬಾರದೆಂದು ಛಿಮಾರಿ ಹಾಕಿತ್ತು.

ಆದರೂ ರವಿವಾರ ಗದಗನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮತ್ತೆ ಕನ್ನೇರಿ ಸ್ವಾಮಿ ತಮ್ಮ ನಾಲಿಗೆಯನ್ನು ಒಂದು ಧರ್ಮದ ವಿರುದ್ಧ ಹರಿಬಿಟ್ಟಿದ್ದಾರೆ. ಹೀಗಾಗಿ ಗದಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸ್ ಇಲಾಖೆಯವರು ಸ್ವಯಂಪ್ರೇರಿತ ಸುಮೋಟೊ ಪ್ರಕರಣವನ್ನು ದಾಖಲಿಸಬೇಕೆಂದು ಗದಗ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸುತ್ತದೆ.

ಮೊನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಈ ನಾಡಿನ ಚಿಂತಕರು, ಜಾನಪದ ತಜ್ಞರು, ಬಸವಾನುಯಾಯಿಗಳಾದ ಕಲಬುರ್ಗಿಯ ಮಿನಾಕ್ಷಿ ಬಾಳಿ ಹೆಸರನ್ನು ಪ್ರಸ್ತಾಪಿಸಿ ಅವರನ್ನು ಅಶ್ಲೀಲ ಭಾಷೆಯ ಮೂಲಕ ನಿಂದಿಸಿದ ಕನ್ನೇರಿ ಸ್ವಾಮಿ ಸಾರ್ವಜನಿಕವಾಗಿ ಅವರಿಗೆ ಮಾನಹಾನಿ ಮಾಡಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ ಹಿಂದೂ ಸಮಾವೇಶದಲ್ಲಿ ಬೇರೆ ಧರ್ಮದ ಹೆಸರನ್ನು ಬಳಸಿ ಅಲ್ಲಿ ನೆರೆದ ಜನರನ್ನು ಇನ್ನೂಂದು ಧರ್ಮದ ವಿರುದ್ಧ ಎತ್ತಿಕಟ್ಟಿ ದ್ವೇಷ ಭಾಷಣ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಪರಸ್ಪರ ಪ್ರಿತಿಸಿ ವಿವಾಹವಾದ ಅಂತರಧರ್ಮಿಯರ ಹೆಸರುಗಳನ್ನು ಬಹಿರಂಗವಾಗಿ ಉಲ್ಲೇಖಿಸಿ ಲವ್ ಜಿಹಾದ್ ಎಂಬ ಹೆಸರಿನ ಮೂಲಕ ಒಂದು ಧರ್ಮದ ವಿರುದ್ಧ ಅಲ್ಲಿ ನೆರೆದ ಜನರನ್ನು ಎತ್ತಿ ಕಟ್ಟಿ, ಪ್ರಚೋದಿಸುವ ಮಾತುಗಳನ್ನಾಡುವ ಮೂಲಕ ದ್ವೇಷ ಭಾಷಣ ಮಾಡಿ ಗದಗ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮೂಲಕ ಜನರನ್ನು ಪ್ರಚೋದಿಸಿದ್ದಾರೆ.

ಇವರು ಬರುವ ಎರಡು ದಿನಗಳ ಮುಂಚೆಯೇ ಸಮಾನತೆಗಾಗಿ ನಾವು ಎಂಬ ವೇದಿಕೆಯಿಂದ ಈ ಕನ್ನೇರಿ ಸ್ವಾಮೀಜಿಯನ್ನು ಗದಗ ಜಿಲ್ಲೆಗೆ ಬರಲು ನಿರ್ಬಂಧಿಸಬೇಕು, ಈ ಸ್ವಾಮೀಜಿ ಒಂದು ಧರ್ಮದ ವಿರುದ್ಧ ಮಾತನಾಡಿ ಗದಗ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಾರೆ ಎಂದು ಗದಗ ಜಿಲ್ಲಾಧಿಕಾರಿಗಳಿಗೆ ಹಾಗೂ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಯನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತ ಇಂತ ಕೋಮುವಾದಿ ಕನ್ನೇರಿ ಸ್ವಾಮೀಜಿಯನ್ನು ಗದಗ ಪ್ರವೇಶಿಸಲು ಅನುಮತಿ ನೀಡಿದರು. ಈಗ ಗದಗ ಜಿಲ್ಲೆಯ ಸೌಹಾರ್ದತೆಯನ್ನು ಅವರು ಹಾಳು ಮಾಡಿ ಹೋಗಿದ್ದಾರೆ.

ಮೇ 30 ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಹಿಂದೂ ಸಮಾವೇಶದ ವಿರುದ್ಧ ನಗರದ ಗಾಂದಿ ವೃತ್ತದಲ್ಲಿ ಸಾಮೂಹಿಕ ವಚನ ಪಠಣ ಹಾಗೂ ಸಂವಿಧಾನದ ಪೂರ್ವ ಪೀಠಿಕೆಯ ಸಮಾನತೆಯ ಉದ್ಘೋಷ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅದನ್ನು ಪ್ರಸ್ತಾಪಿಸಿದ ಕನ್ನೇರಿ ಸ್ವಾಮೀಜಿ ಆ ಕಾರ್ಯಕ್ರಮದಲ್ಲಿ ನರೇಗಾ ಕಾರ್ಮಿಕರನ್ನು ಕರೆತಂದಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಾಮೂಹಿಕ ವಚನ ಪಠಣದ ಕಾರ್ಯಕ್ರಮಕ್ಕೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡದ್ದನ್ನು ಕನ್ನೇರಿ ಸ್ವಾಮೀಜಿ ಬಹಿರಂಗ ಪಡಿಸಬೇಕು ಇಲ್ಲ ಅಂದ್ರೆ ಕ್ಷಮಾಪಣೆ ಕೇಳಬೇಕು.

ಗದಗ ಜಿಲ್ಲಾಡಳಿತ ಗದಗ ಪೋಲಿಸ್ ವರಿಷ್ಠಾಧಿಕಾರಿಗಳು ಎಚ್ಚೆತ್ತುಕೊಂಡು ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ದ್ವೇಷ ಭಾಷಣ ಮಾಡಿದ ಕನ್ನೇರಿ ಸ್ವಾಮೀಜಿಯ ಮೇಲೆ ತಕ್ಷಣ ಸ್ವಯಂ ಪ್ರೇರಿತ ಸುಮೋಟೊ ಪ್ರಕರಣವನ್ನು ದಾಖಲಿಸಿಬೇಕು. ಇಂತಹ ಕೋಮುವಾದಿಗಳನ್ನು ತಕ್ಕ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕೆಂದು ಗದಗ ದಲಿತ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • kanneri RSS ಚೇಲಾ ಅವನಿಗೆ polish station ಹತ್ತಿಸಿ ಚೆನ್ನಾಗಿ ರಾಗಿ ಮುದ್ದಿ ತಿನಿಸಿ

Leave a Reply

Your email address will not be published. Required fields are marked *