ಹಿರೇಬೇಗೂರು
ಚಾಮರಾಜನಗರ ಜಿಲ್ಲೆ ಹಿರೇಬೇಗೂರು ಗ್ರಾಮದಲ್ಲಿ ಸಂಭ್ರಮದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಸೋಮಹಳ್ಳಿ ಮಠದ ನಿಯೋಜಿತ ಸ್ವಾಮೀಜಿಗಳಾದ ಪೂಜ್ಯ ಬಸವಯೋಗಿಪ್ರಭು ಸ್ವಾಮೀಜಿ ಬಸವೇಶ್ವರ ಹಾಗೂ ಗುರುಮಲ್ಲೇಶ್ವರರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮತ್ತು ಷಟ್ ಸ್ಥಲ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.

ಬಸವಯೋಗಿ ಪ್ರಭುಗಳು ಅಲ್ಲಮ ಪ್ರಭುಗಳ ವಚನ ಉಲ್ಲೇಖಿಸಿ ಜಗತ್ತಿಗೆ ಬಸವಣ್ಣನೆ ಗುರು ಎಂದು ಹೇಳಿದರು.
“ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.-
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾ ಮಹಿಮ ಸಂಗನಬಸವಣ್ಣನು, ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.”
ಊರಿನ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಮೂರ್ತಿ ಮೆರವಣಿಗೆ ನಂದಿಕಂಬ ವಿರಾಗಾಸೆ ವಾದ್ಯಗಳ ಮೂಲಕ ನಡೆಯಿತು ಎಲ್ಲೆಡೆ ಬಸವಣ್ಣನವರ ಧ್ವಜ ಮೇರೆಯುತ್ತಿದ್ದವು.


ಬೆಳಿಗ್ಗೆ ಮದ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು. ಗೌಡಿಕೆ ಶಿವಪ್ಪ, ನಂದಿ ಕಂಬ ಗೌಡಿಕೆ ಮಹೇಶ್, ಗುರುಸ್ವಾಮಿ, ಮಹೇಂದ್ರ ಮದು ಚೆರ್ಮೆನ್, ಬಸವ ಬಳಗ ಹಾಗೂ ಬಸವ ಸೇನೆಯ ಯುವಕರು ಗ್ರಾಮದ ಮುಖಂಡರು ಹಾಗು ಅಕ್ಕ ಪಕ್ಕದ ಭಕ್ತರು ಭಾಗವಹಿಸಿದ್ದರು.
