ಕನ್ನೇರಿ ಸ್ವಾಮಿ ಸಮಾವೇಶಕ್ಕೆ ಹೈದರಾಬಾದ ಸಭೆಯಲ್ಲಿ ವಿರೋಧ

ಬಸವ ಮೀಡಿಯಾ
ಬಸವ ಮೀಡಿಯಾ

ಹೈದ್ರಾಬಾದ (ತೆಲಂಗಾಣ):

ಜಿಯಾಗುಡ ಬಸವ ಮಂಟಪದಲ್ಲಿ ಭಾನುವಾರ ಸಂಜೆ ಬಸವ ಜ್ಯೋತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಕನ್ನೇರಿ ಸ್ವಾಮಿಯ ಬಸವಾದಿ ಶಿವಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕನ್ನೇರಿ ಸ್ವಾಮಿ ಬೇಕಾದ್ರೆ ಹಿಂದೂ ಸಮಾವೇಶ ಮಾಡಿಕೊಳ್ಳಲಿ. ಆದರೆ ಬಸವವಾದಿ ಶಿವಶರಣರ ಹೆಸರಲ್ಲಿ ಹಿಂದೂ ಸಮಾವೇಶ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಕನ್ನೇರಿ ಸ್ವಾಮಿ ತಮ್ಮ ಮಠದಲ್ಲಿ ಲಿಂಗಾಯತ ಧರ್ಮದ ಹಾಗೂ ಶಿವಶರಣರ ಯಾವುದೇ ತತ್ವ ಆಚರಿಸುವುದಿಲ್ಲ. ಸ್ವತಃ ಅವರೇ ಇಲ್ಲಿಯವರೆಗೆ ತಮ್ಮ ಹಣೆಯಲ್ಲಿ ವಿಭೂತಿ ಧಾರಣೆ ಸಹ ಮಾಡಿರುವುದಿಲ್ಲ.

ಬಸವತತ್ವ ಪ್ರಚಾರಕರಿಗೆ, ಲಿಂಗಾಯತ ಮಠಾಧೀಶರಿಗೆ ‘ಬಸವ ತಾಲಿಬಾನಿ’ ಎಂದು ಅವಹೇಳನಕಾರಿ ಶಬ್ದಗಳು ಮಾತನಾಡಿ ತನ್ನ ಸ್ವಾಮಿತನಕ್ಕೆ ಮಸಿ ಬಳೆದುಕೊಂಡಿದ್ದಾರೆ. ಆದರಿಂದ ಅವರಿಗೆ ಶರಣಭೂಮಿ ಬಸವಕಲ್ಯಾಣಕ್ಕೆ ಕಾಲಿಡುವ ಯಾವ ಹಕ್ಕು ಇಲ್ಲ. ಅವರು ಕಾರ್ಯಕ್ರಮಕ್ಕೆ ಬರುವುದಕ್ಕೆ ಇಲ್ಲಿನ ಲಿಂಗಾಯತ, ಬಸವಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷರಾದ ವಿಜಯಕುಮಾರ ಪಟ್ನೆ, ಪ್ರಧಾನ ಕಾರ್ಯದರ್ಶಿ ಭೀಮರಾವ ಬಿರಾದಾರ, ಉಪಾಧ್ಯಕ್ಷ ನಾಗರಾಜ ಕಳಸೆ, ರಾಷ್ಟ್ರೀಯ ಬಸವ ದಳ ಯುವ ಘಟಕದ ಅಧ್ಯಕ್ಷ ಮಧು ಇಟಗ್ಯಾಳ, ಹಣಮಂತರಾವ ಮರ್ಜಾಪುರ, ಜೈರಾಜ, ಅಶೋಕ, ದತ್ತು, ಬಸವರಾಜ, ಮಾಣಿಕರೆಡ್ಡಿ, ಸಂಗಮೇಶ, ಲಿಂಗಾಯತ ಧರ್ಮ ಸಂಸದ ಪ್ರಧಾನ ಕಾರ್ಯದರ್ಶಿ ಪ್ರದೀಪ ಬಿರಾದಾರ, ಮಹಿಳಾ ಗಣದ ಶ್ರೀದೇವಿ ಮುಗಟೆ, ಸುನಿತಾ, ಕವಿತಾ, ಜಯಶ್ರೀ, ನೇಮವತಿ, ಜಿಯಾಗುಡ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಭಾಗ್ಯವಾನ ಜವಳೇ, ಶಿವಕಾಂತ ಸ್ವಾಮಿ, ಬಾಬುರಾವ ದುಕಾನದಾರ ಮತ್ತಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬರುವ 28 ರಂದು ‘ಬಸವಕಲ್ಯಾಣ ಚಲೋ’ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಲು ಕರೆ ಕೊಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment

Leave a Reply

Your email address will not be published. Required fields are marked *