ಎರಡನೇ ಬಸವ ಶಕ್ತಿ ಶಿಬಿರ – ಗದಗ
ಗದಗ
ಸಮಾನತೆ, ಕಾಯಕ, ದಾಸೋಹ ತತ್ವಗಳಿರುವ ವಿಶಿಷ್ಟ ಅವೈದಿಕ ಧರ್ಮ ಲಿಂಗಾಯತ. ಅದರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ, ರಾಜಕೀಯ ದಾಳಿಗಳನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನೆನಪು ಮಾಡಿಕೊಡಲು ಬಸವ ಶಕ್ತಿ ಶಿಬಿರಗಳು ನಡೆಯುತ್ತಿವೆ, ಎಂದು ಪೂಜ್ಯ ಡಾ ತೋಂಟದ ಸಿದ್ದರಾಮ ಸ್ವಾಮೀಜಿ ಶನಿವಾರ ಹೇಳಿದರು.
ನಗರದಲ್ಲಿ ಶುರುವಾದ ಎರಡು ದಿನಗಳ ಬಸವ ಶಕ್ತಿ ಶಿಬಿರಗಳಿಗೆ ಬಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ಆಶೀರ್ವಚನ ನುಡಿದರು.

ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸುವುದು ಇಂದಿನ ಅಗತ್ಯಗಳಲ್ಲಿ ಒಂದು. ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಕೆಲಸ ಈ ಶಿಬಿರಗಳಿಂದ ಶುರುವಾಗಿದೆ, ಎಂದು ಹೇಳಿದರು.
ಈಗಿನ ರಾಜಕೀಯ ಹಣ, ಹೆಂಡದಿಂದ ನಡೆಯುತ್ತಿದೆ. ಬಸವಾದಿ ಶರಣರನ್ನು ರಾಜಕಾರಣಿಗಳು ಯಾವುದೇ ಭೀತಿಯಿಲ್ಲದೆ ವಿರೋಧಿಸುತ್ತಿದ್ದಾರೆ.
ವಚನಗಳ ಹಾಗೂ ಸಂವಿಧಾನದ ಆಶಯಗಳು ಬೇರೆಯಲ್ಲ. ಇವುಗಳನ್ನು ಒಪ್ಪಿಕೊಳ್ಳುವ ರಾಜಕಾರಣಿಗಳನ್ನು ಬೆಂಬಲಿಸುವ ಜಾಗೃತಿಯನ್ನು ಲಿಂಗಾಯತರಲ್ಲಿ ಬಸವ ಶಕ್ತಿ ಶಿಬಿರಗಳು ಮೂಡಿಸುತ್ತಿವೆ ಎಂದು ಹೇಳಿದರು.

ನಮ್ಮದು ವಿಭಿನ್ನ ಧರ್ಮ, ಸಂಸ್ಕೃತಿ, ಭಾಷೆಗಳು ಸಾಮರಸ್ಯದಿಂದ ಬದುಕುತ್ತಿರುವ ರಾಷ್ಟ್ರ. ಇಂದು ಕೆಲವು ಪಕ್ಷಗಳು ಸಮಾಜದಲ್ಲಿ ದ್ವೇಷ ಬಿತ್ತುವ, ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿವೆ. ಒಂದೇ ಭಾಷೆ, ಧರ್ಮ, ಸಂಸ್ಕೃತಿ, ಚುನಾವಣೆ ಹೇರುವ ಪ್ರಯತ್ನ ಮಾಡುತ್ತಿವೆ.
ಇವುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಸವ ಶಕ್ತಿ ಶಿಬಿರಗಳಲ್ಲಿ ಎಲ್ಲರು ಪಾಲ್ಗೊಂಡು ಮುನ್ನಡೆಸಬೇಕು. ಇಲ್ಲಿರೋ ನೂರು ಜನ ಸಾವಿರ ಜನರನ್ನು ಸೇರಿಸಿ ಅವರು 10 ಸಾವಿರ ಜನರಲ್ಲಿ ಜಾಗೃತಿ ಮೂಡಿಸಿ ಶಿಬಿರಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಮಂಜುಳಾ ಹಾಸಿಲ್ಕರ್ ಮತ್ತು ಶ್ರೀದೇವಿ ಶೆಟ್ಟರ್ ಅವರ ವಚನ ಓದಿನಿಂದ ಶುರುವಾಯಿತು.
ಶೇಖಣ್ಣ ಕವಳಿಕಾಯಿ ಸಂವಿಧಾನ ಪೀಠಿಕೆಯನ್ನು ಶಿಬಿರಾರ್ಥಿಗಳಿಗೆ ಬೋದಿಸಿದರು. ಜೆ. ಎಲ್. ಎಂ ಗದಗ ಜಿಲ್ಲೆ ಕೆ. ಎಸ್. ಚಟ್ಟಿ ಸ್ವಾಗತ ಭಾಷಣ ಮಾಡಿದರು. ಬಸವ ಮೀಡಿಯಾದ ಎಂ. ಎ. ಅರುಣ ಪ್ರಸಾವನೆ ನುಡಿದರು. ರವೀಂದ್ರ ಹೊನವಾಡ, ಸುಜಾತ ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು ಐದು ವಿಷಯಗಳ ಮೇಲೆ ಮೊದಲ ದಿನದ ಚರ್ಚೆ, ಸಂವಾದ ನಡೆಯಿತು.


ಬಸವಾದಿ ಶರಣರ ಹಿಂದೂಸಮಾವೇಶ ಮಾಡುವ ಕುತಂತ್ರಿಗಳಿಗೆ ಎಚ್ಚರಿಕೆ ನೀಡಬೇಕಾಗಿದೆ. ಇದಕ್ಕಾಗಿ ನಾವುಗಳು ಜಾಗ್ರತೆ ಇರಬೇಕು.
ಇದಕ್ಕೆ ಉತ್ತರ ಪ್ರತಿದಿನ ಲಿಂಗ ಧ್ಯಾನ,
ಬಹಳ ಜನರಿಗೆ ಲಿಂಗದ ಮಹತ್ವ ಗೋತ್ತಿಲ್ಲ, ಬಸವಣ್ಣ ಯಾವ ಉದ್ದೇಶಕ್ಕಾಗಿ ಪ್ರತಿಯೊಬ್ಬರಿಗು ಲಿಂಗಧಾರಣೆ ಏಕೆ ಮಾಡಿದ ಗೊತ್ತಿಲ್ಲ.