ಹಾವೇರಿ:
ಬಸವ ಬಳಗದ ವತಿಯಿಂದ ಬಸವ ಪಂಚಮಿ ಆಚರಿಸಲಾಯಿತು.

ನಾಗೇಂದ್ರ ಮಟ್ಟಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಹಾಲಿನಲ್ಲಿರುವ ಪೌಷ್ಟಿಕತೆ ಹಾಗೂ ಅದರ ಉಪಯುಕ್ತತೆ ಬಗ್ಗೆ ತಿಳಿಸಿಕೊಟ್ಟು, ಅವರಿಗೆ ಕುಡಿಯಲು ಹಾಲನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಮಲ್ಲಿಕಾರ್ಜುನ ಹಿಂಚಿಗೇರಿ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಶಿವಯೋಗಿ ಬೆನ್ನೂರ, ಮುರಿಗೆಪ್ಪ ಕಡೆಕೊಪ್ಪ, ಚಂದ್ರಶೇಖರ ಮಾಳಗಿ, ಶಂಕ್ರಪ್ಪ ಜಾಯಗೊಂಡ, ಶಿವಾನಂದ ಅಂಗಡಿ, ಪುಟ್ಟಪ್ಪ ಮಲಕಣ್ಣನವರ, ನಗರಸಭಾ ಮಾಜಿ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ, ಭೀಮಪ್ಪ ಅಗಡಿ, ನಿವೃತ್ತ ಶಿಕ್ಷಕ ಗೋವಿಂದಪ್ಪ ದೊಡ್ಮನಿ, ಎಸ್.ಎನ್. ಕೋಳಿ ನಿಂಗಣ್ಣವರ, ಕಾವ್ಯ ಅಂಗಡಿ ಹಾಗೂ ಅನೇಕ ಮಕ್ಕಳು ಉಪಸ್ಥಿತರಿದ್ದರು.
