ಚಿಂಚೋಳಿ: ಶ್ರಾವಣ ಮಾಸದ ವಚನ ಚಿಂತನ ಗೋಷ್ಠಿಗೆ ಸಮಾರೋಪ

ಚಿಂಚೋಳಿ:

ತಾಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ಸಮಿತಿ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ರವಿವಾರ ಹಮ್ಮಿಕೊಂಡಿದ್ದ ವಚನ ಚಿಂತನ ಗೋಷ್ಠಿಗಳ ಸಮಾರೋಪ ಸಮಾರಂಭ ಭಕ್ತಿಭಾವದಿಂದ ನಡೆಯಿತು.

ಪರುಷ ಕಟ್ಟೆ ಸಮಿತಿ ಅಧ್ಯಕ್ಷ ಆನಂದಕುಮಾರ ಬೆಡಸೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಪ್ರಭುಶ್ರೀ ತಾಯಿ, ಕಲಬುರಗಿ ಸಾನಿಧ್ಯ ವಹಿಸಿದ್ದರು. ಡಾ. ಸಿ.ಎಸ್. ರಗಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಸವಾದಿ ಶರಣರು ಮತ್ತು ವಚನ ಸಾಹಿತ್ಯ ಕುರಿತು ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಮೌಲಾನಾ ಆಜಾದ್ ಶಾಲೆಯ ಉಲ್ಫತ ಬೀ, ವೈಶಾಲಿ ಹಾಗೂ ಮಹಮ್ಮದ್ ಖಾದ್ರಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಬಹುಮಾನ ಪಡೆದುಕೊಂಡರು.

ಪ್ರಾಥಮಿಕ ವಿಭಾಗದಲ್ಲಿ ವಿಶ್ವಗಂಗಾ ಶಾಲೆಯ ನಾಗರಾಜ್, ಕೃತಿಕಾ ಹಾಗೂ ಕಲಾಂ ಕಾನ್ವೆಂಟ್ ಶಾಲೆಯ ಪ್ರಗತಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಚನ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಗಮನ ಸೆಳೆದರು. ತುಕಾರಾಮ ಭಕ್ತಂಪಳ್ಳಿ, ಹನುಮಂತ ಭಕ್ತಂಪಳ್ಳಿ ಹಾಗೂ ಮಡಿವಾಳಪ್ಪ ರಗಟೆ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲಾ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಸಮವಸ್ತ್ರ ನೀಡುತ್ತಿರುವ ಜ್ಞಾನೇಶ್ವರಿ ಸಜ್ಜನ್ ಹಾಗೂ ಸ್ವಂತ ಖರ್ಚಿನಲ್ಲಿ ಬೀದಿ ದೀಪಗಳನ್ನು ಅಳವಡಿಸಿದ ಸುರೇಶ ನವಲೆ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಅಡುಗೆ ಸಮಿತಿಯ ಅಣಿವೀರಯ್ಯ ಸ್ವಾಮಿ, ವೀರಶೆಟ್ಟಿ ದುಬಲಗುಂಡಿ, ದಿಲೀಪ್ ಬೆಡಸೂರ, ಬಸವರಾಜ ಕೊಡಂಗಲ, ಮಹೇಶ್ ಕೊಡಂಗಲ ಹಾಗೂ ಶಿವಶಂಕರ್ ಕೊಡಂಗಲ ಅವರನ್ನು ಸತ್ಕರಿಸಲಾಯಿತು.

ರಾಧಿಕಾ ಹಿರೇಮಠ ಸ್ವಾಗತಿಸಿದರು. ವಿಶಾಲಾಕ್ಷಿ ಮದರ್ಗಿಮಠ ವಂದಿಸಿದರು. ಜ್ಯೋತಿ ಸಂಗೊಂಡ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ರಾಮರೆಡ್ಡಿ ಪಾಟೀಲ, ನರಸಪ್ಪ ಗಣಪೂರ, ಬಲಭೀಮ ರಾಠೋಡ, ಮೊಹಮ್ಮದ್ ನಾಯ್ಕೋಡಿ, ಮಹಾಂತೇಶ ಹಡಪದ, ಸಂಗಮೇಶ ರಗಟೆ, ಚಂದ್ರಯ್ಯ ಸ್ವಾಮಿ ಮದರ್ಗಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶ್ರಾವಣ ಮಾಸದಾದ್ಯಂತ ನಡೆದ ವಚನ ಚಿಂತನ ಗೋಷ್ಠಿಗಳಲ್ಲಿ ಬಸವತತ್ವ, ವಚನ ಸಾಹಿತ್ಯ ಹಾಗೂ ಬಸವಾದಿ ಶರಣರ ವಿಚಾರಧಾರೆಗಳ ಕುರಿತು ಚಿಂತನ-ಮಂಥನ ನಡೆಯಿತು.

ಸಮಿತಿಯ ಪದಾಧಿಕಾರಿಗಳಾದ ಶಿವಮೂರ್ತಿ ಜಾಡರ, ವೀರಸಂಗಯ್ಯ ಸ್ವಾಮಿ, ಶಾಂತಕುಮಾರ ಸೀತಾಳಗೆರೆ, ಶರಣಕುಮಾರ ನೇತಿ, ಶರಣಪ್ಪ ಕಪಲಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು.

ಸಮಾರೋಪದ ಅಂಗವಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಮಿರ್ಚಿ-ಬಜ್ಜಿ, ಅನ್ನ–ಸಾರು ಹಾಗೂ ಸಿಹಿ ಪದಾರ್ಥ ವಿತರಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *