ಲಿಂಗಸುಗೂರಿನಲ್ಲಿ ನವವಚನ ಚಿಂತನೆ ಕಾರ್ಯಕ್ರಮದ ಸಮಾರೋಪ

ಲಿಂಗಸುಗೂರು :

ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಶಾಖೆ ಅನುಭವ ಮಂಟಪ, ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸಹಯೋಗದಲ್ಲಿ ನವರಾತ್ರಿ ಅಂಗವಾಗಿ ನಡೆದ ನವ ವಚನ ಚಿಂತನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಈಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ 12ನೇ ಶತಮಾನದ ಪ್ರಮುಖ ವಚನಕಾರ್ತಿರತಿ, ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯ ಜೀವನ ಚರಿತ್ರೆ ಮತ್ತು ಅವರ ವಚನ ವಿಶ್ಲೇಷಣೆಯು ಶಿಕ್ಷಕಿಯರಾದ ಗಂಗಮ್ಮ ಯಲ್ದುರ್ಗಾ ಅವರಿಂದ ಜರುಗಿತು.

ತತ್ತ್ವಗಳಿಗೆ ಮನಸು ಸೋತ ಧರ್ಮ ಎಂದರೆ ಅದು ಬಸವಧರ್ಮ ಧರ್ಮ ಮಾತ್ರ. ಮುಮತೆ, ಕಕ್ಕುಲತೆಯ ಬಸವತತ್ವ ಮತ್ತು ಬುದ್ಧನ ಕರುಣಾಮಯಿ ತತ್ವಗಳ ಪ್ರೇರಣೆಯಿಂದ ಸಂವಿಧಾನ ರಚನೆಗೆ ಸ್ಫೂರ್ತಿಯಾಯಿತು ಎಂದರು.

12ನೇ ಶತಮಾನದ ವಚನಕಾರ್ತಿಯರು ತಮ್ಮ ಕಾಯಕ ತತ್ವದ ಮೂಲಕ ವಚನಗಳನ್ನು ರಚಿಸಿದರು. ವಚನಗಳೆಂದರೆ ಬರಿ ಮಾತಲ್ಲ ಪ್ರತಿಜ್ಞೆ, ಅದು ಸಂಕಲ್ಪವಾಗಿದೆ ಎಂದರು.

ವಚನಕಾರ್ತಿ ಅಕ್ಕಮಹಾದೇವಿ ಅವರು ಪ್ರಪ್ರಥಮ ಮಹಿಳಾ ಕವಯಿತ್ರಿ. ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಜನಿಸಿದರು. ಬಾಲ್ಯದಿಂದಲೂ ಶಿವನಲ್ಲಿ ಅಚಲ ಭಕ್ತಿಯನ್ನು ಹೊಂದಿದ್ದರು. ಮತ್ತು ಆ ಪರಶಿವನನ್ನೇ ತನ್ನ ಪತಿಯಾಗಿ ಸ್ವೀಕರಿಸಿದರು.

ಸ್ಥಳೀಯ ರಾಜನಾದ ಕೌಶಿಕನು ಅಕ್ಕಮಹಾದೇವಿಯನ್ನು ಬಯಸಿದನು. ತಂದೆ ತಾಯಿಯ ಒತ್ತಾಯಕ್ಕೆ ಮಣಿದು ಅಕ್ಕಮಹಾದೇವಿ ಅವರನ್ನು ಮದುವೆಯಾದರು. ಆದರೆ ರಾಜನಿಗೆ ಕೆಲವೊಂದು ಷರತ್ತುಗಳನ್ನು ಹಾಕಿ ಅಕ್ಕ ವಿವಾಹವಾಗುತ್ತಾರೆ. ಆತ ಷರತ್ತುಗಳನ್ನು ಉಲ್ಲಂಘಿಸಿದಾಗ ಅಕ್ಕಮಹಾದೇವಿ ಲೌಕಿಕ ಜೀವನವನ್ನು ಮತ್ತು ಅರಮನೆಯನ್ನು ತ್ಯಜಿಸಿ ಹೊರಬರುತ್ತಾಳೆ.

ಮೈ ಮೇಲೆ ಬಟ್ಟೆಯ ಅರಿವಿಲ್ಲದೆ ತನ್ನ ಕೂದಲುಗಳಿಂದ ಮೈ ಮರೆಮಾಚಿ ಹೊರಬಂದಾಗ ಅವರ ತಂದೆ ತಾಯಿಗಳು ಉಡುತಡಿ ಎಂಬ ಮಾತುಗಳನ್ನು ಹೇಳುತ್ತಾರೆ. ಇವತ್ತು ಉಡುತಡಿ ಎಂಬ ಗ್ರಾಮ ಶಿವಮೊಗ್ಗ ಜಿಲ್ಲೆಯಲ್ಲಿದೆ.

ನಂತರ ಅನುಭವ ಮಂಟಪಕ್ಕೆ ಆ ತಾಯಿಯ ಆಗಮನ. ಅಲ್ಲಿ ಮೊದಲನೆಯದಾಗಿ ಕಿನ್ನರಿ ಬೊಮ್ಮಯ್ಯನ ಪರೀಕ್ಷೆ ನಡೆಯುತ್ತದೆ. ನಂತರ ಅಲ್ಲಮಪ್ರಭುದೇವರ ಮತ್ತು ಅಕ್ಕಮಹಾದೇವಿಯ ವಾಗ್ವಾದ ನಡೆಯುತ್ತದೆ. ಅಲ್ಲಿ ಅಕ್ಕಮಹಾದೇವಿಯ ವೈರಾಗ್ಯತನ ಕಂಡು ಎಲ್ಲಾ ಶರಣರು ಶರಣಾಗಿ ಮಹಾದೇವಿ ಅಕ್ಕನಿಗೆ ಜಯಘೋಷ ಹಾಕುತ್ತಾರೆ, ಎಂದು ಗಂಗಮ್ಮ ಹೇಳಿದರು.

ಅಕ್ಕನ ಹಸಿವಾದಡೆ ಭಿಕ್ಷಾನ್ನಗಳುಂಟು, ಉಸಿರಿನ ಪರಿಮಳವಿರಲಿ ಕುಸುಮದ ಹಂಗೇಕೆ, ಎಲ್ಲ ಎಲ್ಲವನ್ನರಿತು ಫಲವೇನಯ್ಯ … ಹೀಗೆ ಇನ್ನಿತರ ಅವರ ವಚನಗಳ ವಿಶ್ಲೇಷಣೆ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಗುರುಮಹಾಂತ ಶ್ರೀಗಳು ವಹಿಸಿದ್ದರು. ಅದೇ ರೀತಿಯಾಗಿ ನಿರಂಜನ ಶ್ರೀಗಳು ನೇತೃತ್ವ ವಹಿಸಿದ್ದರು. ಮತ್ತು ಲಿಂಗಸೂರ ಶಾಖೆ ಅನುಭವ ಮಂಟಪದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.

ಅಕ್ಕನ ಬಳಗದ ವತಿಯಿಂದ ವಚನ ಪ್ರಾರ್ಥನೆ ನಡೆಯಿತು. ಹಾಗೂ 9 ದಿನದ ನಡೆದಂತಹ ನವ ವಚನದ ಚಿಂತನದ ಕಿರು ನೋಟವನ್ನು  ಗಂಗಮ್ಮ ಸತ್ಯಪೇಟೆ ಅವರು ನಡೆಸಿಕೊಟ್ಟರು.

ಕಾರ್ಯಕ್ರಮದ ನಿರೂಪಣೆಯನ್ನು ಅಶ್ವಿನಿ ಮಿಟ್ಟಿಮನಿ ಅವರು ನಡೆಸಿಕೊಟ್ಟರು. ಮತ್ತು 9 ದಿನಗಳ ಕಾಲ ಪ್ರಸಾದ ದಾಸೋಹ ಮಾಡಿದವರಿಗೆ ಪೂಜ್ಯರಿಂದ ಗೌರವ ಸತ್ಕಾರ ಜರಗಿತು.

ಸಮಾರೋಪ ದಿನದ ದಾಸೋಹವನ್ನು ಅಮರವಾಣಿ ಐದ್ನಾಳ ಅವರಿಂದ ಜರುಗಿತು.

ನಿರಂಜನ ಪೂಜ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮತ್ತು ಕೊನೆಯದಾಗಿ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳಿಂದ ಆಶೀರ್ವಚನ ನಡೆಯಿತು.

ಒಟ್ಟಿನಲ್ಲಿ ಮರಣವೇ ಮಹಾನವಮಿ ಎನ್ನುವಂತೆ ಈ ವರ್ಷದ ನವವಚನ ಚಿಂತನ ಯಶಸ್ವಿಯಾಗಿ ಶ್ರೀಮಠದಲ್ಲಿ ನಡೆಯಿತು.

ಲಿಂಗಸುಗೂರ ಅಕ್ಕನ ಬಳಗದ ತಾಯಂದಿರು ವಚನ ವಿಜಯೋತ್ಸವ ಎಂದು ಕೊನೆಯ ದಿನದಂದು ಆಚರಿಸಿದರು. ಮಠದ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *