ಗಂಗಾವತಿ
ಮಂಗಳವಾರ ನಡೆಯಲಿರುವ ಬಸವಾದಿ ಶರಣರ ಹೆಸರಿನ ಹಿಂದು ಸಮಾವೇಶದಲ್ಲಿ ಸಾರ್ವಜನಿಕರು ಪಾಲ್ಗೊಳ್ಳದಂತೆ ಬಸವಪರ ಸಂಘಟನೆಗಳ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಸೋಮವಾರ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಮುಖಂಡ ವೀರೇಶ ಅಸರೆಡ್ಡಿ ಮಾತನಾಡಿ, ಸಮಾವೇಶಕ್ಕೆ ತಹಶೀಲ್ದಾರ, ಜಿಲ್ಲಾಧಿಕಾರಿಗಳು, ಪೊಲೀಸರು, ನಗರಸಭೆ ಅನುಮತಿ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಸಂಘಟನೆ ಈಗಾಗಲೇ ಸಮಾವೇಶಕ್ಕೆ ಅನುಮತಿ ನೀಡದಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತ್ತು. ಆದರೆ, ತಾಲೂಕು ಆಡಳಿತ, ಸಮಾವೇಶ ಕುರಿತು ಮೃದು ಧೋರಣೆ ತಾಳಿದ್ದು ಖಂಡನೀಯ ಎಂದು ಅಸರೆಡ್ಡಿ ಟೀಕಿಸಿದರು.
ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ, ಕಾರ್ಯದರ್ಶಿ ಎ.ಕೆ. ಮಹೇಶ ಕುಮಾರ್ಹಾ ಗೂ ಇತರರು ಪಾಲ್ಗೊಂಡಿದ್ದರು.
