ಸಾಣೇಹಳ್ಳಿ :
ಚಿತ್ರದುರ್ಗ ಆಕಾಶವಾಣಿಯಿಂದ ನವೆಂಬರ್ 4ರಂದು ಬುಧವಾರ ಬೆಳಿಗ್ಗೆ 8.35 ಗಂಟೆಗೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಂದರ್ಶನ ಪ್ರಸಾರವಾಗಲಿದೆ.
ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ (ನವೆಂಬರ್ 1ರಿಂದ 6) ನಾಟಕೋತ್ಸವ ಕುರಿತು, ರಂಗಕರ್ಮಿ ಸಿಜಿಕೆ ಒಡನಾಟ, ಶಿವಕುಮಾರ ರಂಗ ಪ್ರಯೋಗಶಾಲೆ, ಶಿವಸಂಚಾರ ಕುರಿತು ಶ್ರೀಗಳು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅವರನ್ನು ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಸಂದರ್ಶಿಸಿದ್ದಾರೆ ಎಂದು ಚಿತ್ರದುರ್ಗ ಆಕಾಶವಾಣಿಯ ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಶಿವಪ್ರಕಾಶ ಡಿ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
