Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ
ಗ್ಯಾ ಲರಿ

ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 16, 2024
Share
List of Images 1/7
belagavi shraddanjali vahana (1)
belagavi shraddanjali vahana (2)
belagavi shraddanjali vahana (3)
belagavi shraddanjali vahana (4)
belagavi shraddanjali vahana (5)
belagavi shraddanjali vahana (6)
belagavi shraddanjali vahana (7)
SHARE

ಬೆಳಗಾವಿ

ನಗರದ ಬಸವ ಸಂಘಟನೆಗಳಿಂದ ಸದ್ಯದಲ್ಲೇ ಎಲ್ಲಾ ಸಮುದಾಯಗಳ ಬಳಕೆಗಾಗಿ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ ಬರಲಿದೆ.

ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ನೂತನ ವಾಹನದ ಚಾಸಿಸ್ ನ ಪೂಜಾ ಕಾರ್ಯಕ್ರಮವು ವಿಶ್ವಗುರು ಬಸವ ಮಂಟಪದಲ್ಲಿ ಸೋಮವಾರ ನೆರವೇರಿತು. ಯಾರಾದರೂ ಲಿಂಗೈಕ್ಯರಾದಾಗ ಅವರನ್ನು ಮನೆಯಿಂದ ಮಸಣಕ್ಕೆ ಸಾಗಿಸಲು ಅನುಕೂಲವಾಗುವ ಈ ವಾಹನ, ಬೆಳಗಾವಿ ಬಸವ ಕಾಯಕಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವದಳದ ಸಂಯುಕ್ತ ಸೇವಾ ಕಾಣಿಕೆ ಆಗಿದೆ.

ಐಷರ್ ಕಂಪನಿಯ ವಾಹನದ ಚಾಸಿಸ್ ಇದಾಗಿದ್ದು, 14 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಬಸವ ಕಾಯಕ ಜೀವಿಗಳ ಸಂಘಟನೆಯ ನಿರ್ದೇಶಕರು, ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಮತ್ತು ಸಮಾಜದ ಕೆಲವರಿಂದ ಇದಕ್ಕಾಗಿ ಕಾಣಿಕೆ ಪಡೆಯಲಾಗಿದೆ.

ವಿನೂತನ ಮಾದರಿಯಲ್ಲಿ ವಾಹನದ ಕವಚ ಕಟ್ಟಿಸುವ ಯೋಜನೆ ಹೊಂದಲಾಗಿದೆ. ಬಸವಣ್ಣನವರ ಐಕ್ಯಮಂಟಪ ಪರಿಕಲ್ಪನೆಯ ಉದ್ಧೇಶ ಇಟ್ಟುಕೊಂಡಿದ್ದೇವೆ. ಇದಕ್ಕೆ ಇನ್ನು 8 ರಿಂದ 10 ಲಕ್ಷ ರುಪಾಯಿ ಖರ್ಚು ಬರಬಹುದು, ಅದಕ್ಕೆಂದೇ ದಾಸೋಹಿಗಳು ಯಾರಾದರು ಮುಂದೆ ಬಂದಾರು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಕೆ. ಶರಣಪ್ರಸಾದ ಅವರು ಹೇಳುತ್ತಾರೆ.

Share This Article
Twitter Email Copy Link Print
Previous Article ಜಾತಿ ಗಣತಿಗೆ ವಿರೋಧವಿಲ್ಲ, ಆದರೆ ಹೊಸದಾಗಿ ಮಾಡಲಿ: ಬಸವಜಯ ಮೃತ್ಯುಂಜಯ ಶ್ರೀ
Next Article ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕನ್ನೇರಿ ಸ್ವಾಮಿ ಹೇಸಿಗೆಯಲ್ಲಿ ಕುಳಿತ ಜಂತು ಅಂತ ಲಿಂಗಾಯತರು ಸುಮ್ಮನಿದ್ದಾರೆ

By ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ March 8, 2026
ಚರ್ಚೆ

“ಶಿಖಂಡಿ,” “ನಾಯಿ,” “ಹಂದಿಗಳ” ಜೊತೆ ಚರ್ಚೆ ಒಲ್ಲೆ: ಕನ್ನೇರಿ ಸ್ವಾಮಿ 6

By ಬಸವ ಮೀಡಿಯಾ March 8, 2026
ಚಾವಡಿ

ವರ್ಣಾಶ್ರಮಕ್ಕೆ ಸೆಡ್ಡು ಹೊಡೆದು ಸ್ತ್ರೀ ಸಮಾನತೆಯ ಬೆಳಕು ನೀಡಿದ ಬಸವಣ್ಣ

By ಚಿನ್ಮಯಿ ಲೋಕೇಶ ಮಾನ್ವಿ March 8, 2026
ಚರ್ಚೆ

ನಿಜಗುಣಾನಂದ ಪೂಜ್ಯರ ಮೇಲೆ ಹಲ್ಲೆಗೆ ಪ್ರಚೋದನೆ ಮಾಡಿದ ಕನ್ನೇರಿ ಸ್ವಾಮಿ 7

By ಬಸವ ಮೀಡಿಯಾ March 9, 2026
ಸುದ್ದಿ

ಒಂದಾಗಿ ಬಾಳುವುದು ಲಿಂಗಾಯತ ಧರ್ಮದ ಮೂಲ ಸಿದ್ಧಾಂತ: ಯಡಿಯೂರಪ್ಪ

By ಬಸವ ಮೀಡಿಯಾ March 9, 2026
Previous Next

You Might Also Like

ಗ್ಯಾ ಲರಿ

ಕುಸ್ಕೂರಿನಲ್ಲಿ ಬಸವ ಪುತ್ಥಳಿಯ ಸಂಭ್ರಮದ ಅನಾವರಣ

ಶಿಕಾರಿಪುರ: ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಕೂಡಿಸಿ, ಅದ್ಧೂರಿ ಕಾರ್ಯಕ್ರಮದ ಮೂಲಕ ಅನಾವರಣ ಮಾಡಿರುವುದು ಸಾಂಸ್ಕೃತಿಕ ಭಕ್ತಿಯನ್ನು ಉತ್ತೇಜಿಸಿದಂತಾಗಿದೆ ಎಂದು ಪುಷ್ಪಗಿರಿ ಮಠದ ಪೂಜ್ಯ ಡಾ. ಸೋಮಶೇಖರ…

0 Min Read
ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
ಗ್ಯಾ ಲರಿ

ಅರಮನೆ ಮೈದಾನದಲ್ಲಿ ಭೀಮಣ್ಣ ಖಂಡ್ರೆಗೆ ನುಡಿ ನಮನ

ಬೆಂಗಳೂರು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಶನಿವಾರ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿಆಯೋಜಿಸಿದ್ದವು. ಬಸವ…

0 Min Read
ಗ್ಯಾ ಲರಿ

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital