Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
ಗ್ಯಾ ಲರಿ

ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 17, 2024
Share
List of Images 1/7
koppala rotti dasoha kalyana parva (1)
koppala rotti dasoha kalyana parva (2)
koppala rotti dasoha kalyana parva (3)
koppala rotti dasoha kalyana parva (4)
koppala rotti dasoha kalyana parva (5)
koppala rotti dasoha kalyana parva (6)
koppala rotti dasoha kalyana parva (7)
SHARE

ಕೊಪ್ಪಳ:

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ “ಕಲ್ಯಾಣ ಪರ್ವ” ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ ಜೋಳದ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ.

ಈ ಬೃಹತ್ ಕಾರ್ಯಕ್ರಮವನ್ನು ಡಾ. ಗಂಗಾ ಮಾತಾಜಿಯವರ ಬಸವಧರ್ಮ ಪೀಠದಿಂದ ಅಕ್ಟೋಬರ್ 18 ರಿಂದ 20ರವರೆಗೆ ಆಯೋಜಿಸಲಾಗಿದೆ.

ಮುಖ್ಯವಾಗಿ ಟಣಕನಕಲ್ ಗ್ರಾಮ ಹಾಗೂ ಹಟ್ಟಿ ಗ್ರಾಮದಿಂದ ಸುಮಾರು ನೂರು ಮನೆಯವರು ಇಷ್ಟೊಂದು ರೊಟ್ಟಿ ಮಾಡಿಕೊಟ್ಟಿದ್ದಾರೆ.

ಗ್ರಾಮದ ರೈತರಿಂದ ದಾಸೋಹದ ಮೂಲಕ ಸಂಗ್ರಹಿಸಲಾದ ಒಟ್ಟು ಮೂರು ಕ್ವಿಂಟಲ್ ಜೋಳವನ್ನು ಗಿರಣಿಗೆ ಹೊಯ್ದು ಹಿಟ್ಟು ಹಾಕಿಸಲಾಯಿತು. ನಂತರ ಹಿಟ್ಟನ್ನು ಹಂಚಿಕೊಂಡು ಪ್ರತಿ ಮನೆಯ ಶರಣೆಯರು ಕಳೆದೊಂದು ವಾರದಿಂದ ರೊಟ್ಟಿ ತಯಾರಿಸಿದರು. ನಂತರ ರೊಟ್ಟಿಗಳನ್ನು ಒಂದು ಕಡೆ ಸಂಗ್ರಹಿಸಿ ಇದೇ ಗ್ರಾಮಗಳಿಂದ ಸಮಾವೇಶದಲ್ಲಿ ಫಾಲ್ಗೊಳ್ಳುವವರ ಮೂಲಕ ವಾಹನಗಳಲ್ಲಿ ಬಸವ ಕಲ್ಯಾಣಕ್ಕೆ ಸಾಗಿಸಲಾಯಿತು.

ಕಳೆದ ಮೂರು ವರ್ಷದಿಂದ ಬಸವಭಕ್ತರಿಂದ ಈ ರೊಟ್ಟಿ ದಾಸೋಹ ಸೇವೆ ನಡೆದಿದೆ.

ಕಳೆದ ಎರಡು ವರ್ಷ ತಲಾ 05 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿತ್ತು, ಈ ವರ್ಷ 10 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ. ಅದರಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ದಾಸೋಹ ಮಾಡಲಾಗಿದೆ ಎಂದು ಬಸವಭಕ್ತರು, ರಾಷ್ಟ್ರೀಯ ಬಸವದಳದ ಕೊಪ್ಪಳ ಜಿಲ್ಲಾ ಮುಖಂಡರು ಆಗಿರುವ ಡಿ.ಟಿ. ಶಿವಬಸಯ್ಯ ಹೇಳುತ್ತಾರೆ.

ಸುಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುವ ಪ್ರತಿ ಶರಣ ಮೇಳಕ್ಕೆ 5 ಕ್ವಿಂಟಲ್ ಮಾದಲಿ(ಸಿಹಿಪದಾರ್ಥ)ಯನ್ನು ಸಹ ದಾಸೋಹ ಮಾಡುತ್ತಾ ಬಂದಿದ್ದೇವೆ ಎಂದು ಶಿವಬಸಯ್ಯ ಹೇಳಿದರು.

Share This Article
Twitter Email Copy Link Print
Previous Article ಶರಣರು ಮಠ ಕಟ್ಟಲಿಲ್ಲ, ಅನುಭವ ಮಂಟಪ ಕಟ್ಟಿದರು: ಚನ್ನಬಸವ ಶಿಕ್ಷಕರು
Next Article ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಬೆಣ್ಣೆನಗರಿಯಲ್ಲಿ ‘ವಚನ ನಾದಲೋಕ’ ಸೃಷ್ಟಿಸಿದ 3,600 ಗಾಯಕರು

By ವಿ. ಯೋಗೇಶ್ ಯಲಗಟ್ಟೆ October 1, 2026
ಇಂದು

ಹಳಕಟ್ಟಿ ಜೀವನ ಆಧಾರಿತ ಚಲನಚಿತ್ರಕ್ಕೆ ಚಾಲನೆ

By ಬಸವ ಮೀಡಿಯಾ October 3, 2026
ಅರಿವು

ಕೋಟಿ ವಚನಗಳು ಎಲ್ಲಿ ಹೋದವು? ಸಿದ್ಧರಾಮರ ಒಂದು ವಚನದ ಸುತ್ತ

By ವಿನಯ್ ಶಿರಹಟ್ಟಿಮಠ September 29, 2026
ಅರಿವು

ದೇವದಾಸಿ ಸಮುದಾಯದ ಯುವಕ, ಯುವತಿಯರಿಗೆ ಇಷ್ಟಲಿಂಗ ದೀಕ್ಷೆ

By sufy September 29, 2026
ಸುದ್ದಿ

ಅಕ್ಟೋಬರ್ 11ರಿಂದ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ

By ಬಸವ ಮೀಡಿಯಾ September 29, 2026
Previous Next

You Might Also Like

ಗ್ಯಾ ಲರಿ

ಧಾರವಾಡ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಧಾರವಾಡ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಧಾರವಾಡ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಧಾರವಾಡ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital