ಎಪ್ರಿಲ್‌ 20, 2027, ಅನುಭವ ಮಂಟಪ ಲೋಕಾರ್ಪಣೆ: ಈಶ್ವರ್‌ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಾಮಗಾರಿ ಶೇ.80 ಪೂರ್ಣ

ಬೀದರ್‌

ಬಸವಕಲ್ಯಾಣದಲ್ಲಿ 750 ಕೋ.ಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂಬರುವ ಬಸವ ಜಯಂತಿಯಂದು (ಎಪ್ರಿಲ್‌ 20) ಲೋಕಾರ್ಪಣೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಶನಿವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನೂತನ ಅನುಭವ ಮಂಟಪದ ಕಾಮಗಾರಿ ಈಗಾಗಲೇ ಶೇ.80 ಪೂರ್ಣಗೊಂಡಿದ್ದು 480 ಕೋಟಿ ಖರ್ಚಾಗಿವೆ. ಇನ್ನೊಂದು ವಾರದಲ್ಲಿ 50 ಕೋಟಿ, ಮಾರ್ಚ್‌ ಒಳಗಾಗಿ 150 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಕಳೆದ ತಿಂಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಸವಕಲ್ಯಾಣಕ್ಕೆ ಭೇಟಿ ನೀಡಿ ನೂತನ ಅನುಭವ ಮಂಟಪದ ಕಾಮಗಾರಿಯನ್ನು ಪರಿಶೀಲಿಸಿದ್ದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಕಳೆದ ಎರಡ್ಮೂರು ವರ್ಷಗಳಿಂದ ಅನುಭವ ಮಂಟಪದ ಕಾಮಗಾರಿ ಕೆಲಸ ನಡೆಯುತ್ತಿದೆ‌. ₹740 ಕೋಟಿ ಮೊತ್ತದ ಕ್ರಿಯಾ ಯೋಜನೆ ಆಗಿದ್ದು, ಇದಕ್ಕೆ ಹಣದ ಕೊರತೆ ಇಲ್ಲ. ಆದಷ್ಟು ಬೇಗ ಅನುಭವ‌ ಮಂಟಪದ ಕೆಲಸ ಪೂರ್ಣ ಆಗುತ್ತದೆ,” ಎಂದು ಹೇಳಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಅನುದಿನವು ಕ್ರಿಯಾಶೀಲ ಅನುಭವ ಮಂಟಪವಾಗಲಿ

Leave a Reply

Your email address will not be published. Required fields are marked *