ಹಿಂದೂ ಸಮಾವೇಶ ನಿರ್ಬಂಧಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ :

ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಗಂಗಾವತಿ ನಗರದಲ್ಲಿ ಇದೇ 3ರಂದು ನಡೆಸಲು ಉದ್ದೇಶಿಸಿರುವ ಹಿಂದೂ ಸಮಾವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಜಿಲ್ಲಾಧಿಕಾರಿಗಳಿಗೆ ಒಕ್ಕೂಟ ಸಲ್ಲಿಸಿದ ಮನವಿಪತ್ರದಲ್ಲಿ, ಮಹಾರಾಷ್ಟ್ರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ನಾಡಿನ ಮಠಾಧಿಪತಿಗಳಿಗೆ ಹಾಗೂ ಪ್ರಗತಿಪರ ಚಿಂತಕರಿಗೆ, ಹೋರಾಟಗಾರರಿಗೆ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆಯನ್ನು ಬಳಸಿ ಅಪಮಾನ ಮಾಡಿದ್ದಾರೆ.

ಇವರಿಗೆ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟಗಳು ನೀನು ಒಳ್ಳೆಯ ಪ್ರಜೆ ಅಲ್ಲ ಎಂದು ಛೀಮಾರಿ ಹಾಕಿವೆ. ಆದರೂ ಈ ಮನುಷ್ಯ ಬಸವಾದಿ ಶರಣರ ವಿಚಾರಗಳನ್ನು ತಿರುಚುವ ಹಾಗೂ ಕಲುಷಿತಗೊಳಿಸುವ ಕೆಲಸವನ್ನು ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ಮುಖಾಂತರ ನಿರಂತರ ಮಾಡುತ್ತಿದ್ದಾರೆ.

03-11-2026 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬಸವಾದಿ ಶರಣರ ವಿಚಾರಗಳನ್ನು ತಿರುಚುವ ಹಾಗೂ ಕಲುಷಿತಗೊಳಿಸುವ ಕೆಲಸವನ್ನು ಮುಂದುವರೆಸಿದ್ದಾರೆ ಮತ್ತು ಬಸವಾನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಹೀಯಾಳಿಸುವುದು ಹಾಗೂ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದೇ ಇವರ ಸಮಾವೇಶದ ಮುಖ್ಯ ಕೆಲಸವಾಗಿದೆ.

ಈ ಮೂಲಕ ನಾಡಿನ ಕೋಮುಸೌಹಾರ್ದತೆಯನ್ನು ನಾಶಗೊಳಿಸುವ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಲು ಹೊರಟಿರುವ ಕನ್ನೇರಿ ಸ್ವಾಮಿಯ ಗಂಗಾವತಿ ಸಮಾವೇಶ ರದ್ದುಗೊಳಿಸಿ ಮತ್ತು ಆತನಿಗೆ ಕೊಪ್ಪಳ ಜಿಲ್ಲಾ ಪ್ರವೇಶವನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಗಿದೆ.

ಶಾಂತಿಭಂಗ ಮಾಡುವ, ಕೋಮು-ಗಲಭೆಗೆ ಪ್ರಚೋದನೆ ಮಾಡುವ, ಜನರ ಮದ್ಯೆ ವಿಷಬೀಜ ಬಿತ್ತುವ ಈ ಅವಿವೇಕದ ಕನ್ನೇರಿಮಠದ ಸ್ವಾಮಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. ತುರ್ತಾಗಿ ಈ ಕಾರ್ಯ ಮಾಡಬೇಕೆಂದು ತಮ್ಮಲ್ಲಿ ವಿನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿವೆ.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಬಸವರಾಜ ಶೀಲವಂತರ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ಗಾಳೆಪ್ಪ ಮುಂಗೋಲಿ, ಹುಲುಗಪ್ಪ ಗೋಕಾವಿ, ಹುಸೇನಸಾಬ ಚಾಂದಪಾಷಾ, ಅಮರಮ್ಮ, ಫಕೀರಮ್ಮ, ಸುಂಕಮ್ಮ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *