ಹುಬ್ಬಳ್ಳಿ
‘ಲಿಂಗಾಯತ ಮಾನ್ಯತೆಗಾಗಿ ಹೋರಾಟ ವೇದಿಕೆಯ ಸಮಾವೇಶ ಜೂನ್ 7 ಬೆಳಿಗ್ಗೆ 10.30ಕ್ಕೆ ವಿದ್ಯಾನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ನೆರವೇರಲಿದೆ.ಎಂದು ವೇದಿಕೆ ಅಧ್ಯಕ್ಷ ಚಿಂತಾಮಣಿ ಸಿಂಧಗಿ ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಉದ್ಘಾಟನೆಯನ್ನು ಪ.ಪೂ. ಶ್ರೀ ಮನ್ನಿರಂಜನ ಜಗದ್ಗುರು ಡಾ।। ತೊಂಟದ ಸಿದ್ದರಾಮ ಮಹಾಸ್ವಾಮಿಗಳು, ಎಡೆಯೂರ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ನೆರವೇರಿಸುವರು, ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುಲಬರ್ಗಾದ ಬಸವತತ್ವ ಚಿಂತಕರಾದ ಸಂಜಯಕುಮಾರ ಮಾಕಲ ಹಾಗೂ ವಿಜಯಪುರದ ಬಸವತತ್ವ ಚಿಂತಕರಾದ ಡಾ| ಜೆ.ಎಸ್. ಪಾಟೀಲ ಅವರು ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ರಾಜಣ್ಣ ಕೊರವಿ, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾದ ವಿಜಯಕುಮಾರ ಎಮ್. ಶೀಲವಂತರ, ಲಿಂಗರಾಜನಗರ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಲತಾ ಉಮ್ರಾಣಿ ವಹಿಸುವರು. ಇನ್ನೂ ಮುಂತಾದ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಲಿಂಗಾಯತ ಮುಖಂಡರುಗಳಾದ ಶಿವಣ್ಣ ವಿ. ಅಂಗಡಿ, ನೀಲಕಂಠ ಅಸೂಟಿ, ನಿಂಗನಗೌಡ ಎಮ್. ಮರಿಗೌಡ್ರ, ಪ್ರಕಾಶ ಬಿ. ಭಾವಿಕಟ್ಟಿ, ಮಲ್ಲಿಕಾರ್ಜುನ ಪಿ. ಕುಂಬಾರ, ಮಲ್ಲಿಕಾರ್ಜುನ ನರವಣಿ, ರವೀಂದ್ರನಾಥಗೌಡ ಯ. ಕೆಂಪಲಿಂಗನಗೌಡ್ರ, ಸುರೇಶ ಸೋಮಪ್ಪ ಬಣವಿ, ರವಿ ಕುಡುವಕ್ಕಲಿಗ, ಸಿದ್ದಪ್ಪ ಮಾಯಣ್ಣವರ, ಎಸ್.ಕೆ. ಬಣಕಾರ, ಎಸ್.ಕೆ. ಮಾಲಿಪಾಟೀಲ, ಸದಾನಂದ ಬಿ. ತೇರದಾಳ, ಗೀತಾ ಮರಿಲಿಂಗಣ್ಣವರ ಮುಂತಾದವರು ಉಪಸ್ಥಿತರಿರುವರು.
ಲಿಂಗಾಯತ ಎಲ್ಲಾ ಒಳಪಂಗಡಗಳನ್ನು ಒಕ್ಕೂಟದಿಂದ ಒಗ್ಗೂಡಿಸುವುದು. ಲಿಂಗಾಯತ ಪ್ರತ್ಯೇಕ ಧರ್ಮದ ಸರಕಾರದಿಂದ ಮಾನ್ಯತೆ ಪಡೆಯುವುದು ಜೊತೆಗೆ ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತರೆಂದು ಮಾನ್ಯತೆಗೆ ಹೋರಾಟ. ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ಕೂಡ ಬೇಡಿಕೆ ಇದೆ. ಈ ಕಾರ್ಯಕ್ರಮದಲ್ಲಿ ಸುಮಾರು 2000 ಕ್ಕೂ ಹೆಚ್ಚು ಲಿಂಗಾಯತರು ಸೇರುವ ಸಾಧ್ಯತೆ ಇದೆ.
ಪತ್ರಿಕಾಗೋಷ್ಠಿಯಲ್ಲಿ ಚಿಂತಾಮಣಿ ಸಿಂಧಗಿ, ಡಿ.ಸಿ. ರಂಗರಡ್ಡಿ, ಮಲ್ಲಿಕಾರ್ಜುನ ಪಿ. ಕುಂಬಾರ, ಸದಾನಂದ ತೇರದಾಳ, ನೀಲಕಂಠ ಅಸೂಟಿ, ಪ್ರಭು ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
