ಶಿಬಿರದಲ್ಲಿ 300ಕ್ಕೂ ಹೆಚ್ಚು ಜನ ಭಾಗಿ
ಬೆಳಗಾವಿ:
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ.
ಹಿಮಾಲಯದಲ್ಲಿ ಸತತ 6 ವರ್ಷಗಳ ಕಾಲ ಸಾಧನೆ ಮಾಡಿರುವ ಖ್ಯಾತ ಯೋಗಸಾಧಕರಾದ ನಿರಂಜನ ಮಹಾಸ್ವಾಮಿಗಳು ಯೋಗ, ಧ್ಯಾನ ಕುರಿತು ಪ್ರಾತ್ಯಕ್ಷಿಕೆ ಹಾಗೂ ಆಧ್ಯಾತ್ಮಿಕ ಅನುಭಾವದ ಪ್ರವಚನ ನೀಡುತ್ತಲಿದ್ದಾರೆ.

ಶಿಬಿರದಲ್ಲಿ ಉಸಿರಾಟದ ಕ್ರಮಜೋಡುಗಳು, ವಿವಿಧ ಆಸನಗಳು, ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಧ್ಯಾನದ ವಿಧಿಗಳನ್ನು ಕಲಿಸಿಕೊಡುತ್ತಿದ್ದಾರೆ.

ಹಿಮಾಲಯನ್ ಧ್ಯಾನ ಯೋಗ ಶಿಬಿರದ ಅಂಗವಾಗಿ ಇಂದು ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನದಲ್ಲಿ ಅನುಭಾವದ ನುಡಿಗಳನ್ನಾಡಿದ ನಿರಂಜನ ಮಹಾಸ್ವಾಮಿಗಳು, ಬಸವಾದಿ ಶಿವಶರಣರು ಹೇಳಿದಂತೆ ಸೂರ್ಯೋದಯಕ್ಕೂ ಮುನ್ನ ಎದ್ದು, ಯೋಗ ಮಾಡಿ, ಹೂವು ಮತ್ತು ಪತ್ರೆಗಳನ್ನು ತಂದು ಲಿಂಗಪೂಜೆ ಮಾಡಬೇಕು.
ಸಮಯ ಕಳೆದು ಹೋದ ಮೇಲೆ ದೇವರನ್ನು ನೆನೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲ ಮಿಂಚುವುದರೊಳಗೆ ಹಾಗೂ ಮೃತ್ಯು ಬರುವುದರೊಳಗೆ ಭಗವಂತನ ನಿಷ್ಕಾಮ ಸೇವೆಯನ್ನು ಮಾಡಬೇಕೆಂದು ಅವರು ತಿಳಿಸಿದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಧಾರವಾಡ ಮಮ್ಮಿಗಟ್ಟಿ ಬಸವ ಯೋಗಾಶ್ರಮದ ಬಸವಾನಂದ ಮಹಾಸ್ವಾಮಿಗಳು ಮಾತನಾಡಿ, ಆಧುನಿಕ ವೈದ್ಯಕೀಯ ಲೋಕ ಎಷ್ಟೇ ಮುಂದುವರೆದಿದ್ದರೂ ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡಲು ವಿಫಲವಾಗುತ್ತಿದೆ. ಹೀಗಾಗಿ ಎಲ್ಲರೂ ಪ್ರಕೃತಿಗೆ ಹತ್ತಿರವಾಗಿ ಬದುಕಬೇಕು. ಇದರಿಂದ ರೋಗಗಳಿಂದ ದೂರವಾಗಬಹುದು. ಇದರ ಜೊತೆಗೆ ವಿಶ್ವಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗ ಪೂಜೆ ಮಾಡಿದರೆ ದೇಹಾರೋಗ್ಯ ಮತ್ತು ದೀರ್ಘಾಯುಷ್ಯ ಹೊಂದಲು ಸಾಧ್ಯ ಎಂದರು.
ಶಿಬಿರದಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ.

ಓಂಶ್ರೀಗುರುಬಸವಲಿಂಗಾಯನಮಃ
ಅಸೂಟಿಶ್ರೀಫಲಹಾರಶಿವಯೋಗಿಗಳವರ ಜನ್ಮ ತಪೋಭೂಮಿ ಹೊಸಕೇರಿ ಅಂಚೆ. ಎಮ್ ತಿಮ್ಮಾಪುರ. ತಾ. ರಾಮದುರ್ಗ, ಜಿಲ್ಲಾ, ಬೆಳಗಾವಿ ಶ್ರೀ. ಮ. ನಿ. ಪ್ರ. ಸ್ವ. ಮುರುಘರಾಜೇಂದ್ರಕೋರಣೇಶ್ವರ ಮಹಾಸ್ವಾಮಿಗಳು, ಅಸೂಟಿ ಹೊಸಕೇರಿಬಸವನಗರ ಮೆಣಸಗಿ ಅರಹಟ್ಟಿ
ಖಜೂರಿ ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಹೊಸಕೇರಿಬಸವನಗರ ಅಸೂಟಿ ಶ್ರೀ ಫಲಹಾರಶಿವಯೋಗಿಗಳವರ ಜೀವನ ದರ್ಶನ ಅಸೂಟಿ ತಾ. ರೋಣ ಜಿಲ್ಲಾ, ಗದಗ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಚನ್ನಬಸವಯ್ಯನವರಿಂದ ವಿಶ್ವಬಸವಧರ್ಮ ವಿಶ್ವ ದರ್ಶನ ವಿಶ್ವ ವಚನ ಪರಿಚಯ
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ
ಗುರು ಲಿಂಗ ಜಂಗಮದ ಆದ್ಯಂತವನರಿಯದೆ
ಏನೆಂದು ಪೂಜಿಸುವಿರಿ, ಆರಾಧಿಸುವಿರಿ?
ಅದೆಂತೆಂದಡೆ:
ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ
ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು
ಲಿಂಗವಾದ ಪರಿ ಹೆಂಗೇ?
ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ
ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ?
ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು
ವಿಭೂತಿಯಾದ ಪರಿ ಹೇಂಗೆ?
ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ
ರುದ್ರಾಕ್ಷಿಯಾದ ಪರಿ ಹೇಂಗೆ?
ಸಕಲ ಜೀವವೆರಸಿ ಕರಗಿದ ಅಸಿಯ
ಜಲ ತೀರ್ಥವಾದ ಪರಿ ಹೇಂಗೆ?
ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ
ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ?
ಅದೆಂತೆಂಡೆ;
ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ
ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ
ಅಂಗವಾದುದು ಈ ಗುರುವಲಾ ಎಂದು ಅರಿದು
ಆ ಲಿಂಗದ ಚೈತನ್ಯ ಈ ಲಿಂಗವಲಾ ಎಂದು ಅರಿದು
ಮಾಡೂದು ತನು ಮನ ಧನ ವಂಚನೆಯಳಿದು.
ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ
ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು.
ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ
ಬೆಳಗಿನ ಐಶ್ವರಿಯಲಾ ಎಂದರಿದು ಧರಿಸೂದು ಶ್ರೀ ವಿಭೂತಿಯ.
ಆ ಲಿಂಗದ ಶೃಂಗಾರದ ಹರನಾಭರಣವಲಾ ಎಂದರಿದು
ಅಳವಡಿಸೂದು ರುದ್ರಾಕ್ಷಿಯನು.
ಆ ಲಿಂಗದ ಉತ್ತುಂಗ ಕಿರಣ ಚರಣಾಂಬುಜವಲಾ ಎಂದು
ಧರಿಸೂದು, ಕೊಂಬುದು ಪಾದೋದಕವನು.
ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು
ಕೊಂಬುದು ಪ್ರಸಾದವನು.
ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಬಕ್ತ.
ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ
ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ.
ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಬಕ್ತನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು ಕಾಣಾ,
ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ. ಅಸೂಟಿ ಶ್ರೀ ಫಲಹಾರಶಿವಯೋಗಿಗಳವರಿಗೆ ನಿಜದಬೆಳಕು ಸತ್ಯ ದರ್ಶನ ಮಾಡಲಗೇರಿಯ ಹಿರೆಮಠಾಧ್ಯಕ್ಷರಾದ ಶ್ರೀ ಚನ್ನಬಸವಯ್ಯನವರು ಮನಮುಟ್ಟುವಂತೆ ವಿಮರ್ಶೆ
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ;
ವಿಚಾರಿಸಿದೊಡೇನೂ ಹುರುಳಿಲ್ಲವಯ್ಯಾ!
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹ ಮಾಡಿ
ನೀವಿರಿಸಿದಿರಿ, ಕೂಡಲ ಸಂಗಮದೇವಾ.
ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ, ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡೊಡೆ
ಕೂಡಲ ಸಂಗಮದೇವನೊಳಗಿರ್ಪನಯ್ಯಾ
ಮುಂಗೈಯ್ಯ ಕಂಕಣಕ್ಕೆ ಕನ್ನಡಿಯ ತೋರುವಂತೆ
ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು, ನೋಡಾ!
ನಾಯಿಗೆ ನಾರಿವಾಣವಕ್ಕುವುದೆ, ಕೂಡಲ ಸಂಗಮದೇವಾ?
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು;
ನಿಂದಲ್ಲಿ ನಿಲ್ಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು!
ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ
ಭ್ರಮರನಾಗಿರಿಸು, ನಿಮ್ಮ ಧರ್ಮ! ನಿಜದರ್ಶನ ವಿಶ್ವಗುರುಬಸವಣ್ಣನವರ ವಚನ ಪಾರದರ್ಶಕ ನಿಜದ ನಿಲುವು ಮನದಾಳದ ಮಾತು ವಿಷಯಗಳ ಕಡೆಗೆ ಹರಿಯುವಕುರಿತು
ಮರನನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತಲಿದೆ;
ಬೆಂದ ಮನವ ನಾನೆಂತು ನಂಬುವೆನಯ್ಯಾ?
ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲ ಸಂಗಮದೇವನಲ್ಲಿಗೆ ಹೋಗಲೀಯದಯ್ಯಾ! ನಿಜ ಸಂಗತಿ
ಅಂದಣವನೇರಿದ ಸೊಣಗನಂತೆ
ಕಂಡೊಡೆ ಬಿಡದು ತನ್ನ ಮುನ್ನಿನ ಸ್ವಭಾವವನು;
ಸುಡು! ಸುಡು!! ಮನವಿದು ವಿಷಯಕ್ಕೆ ಹರಿವುದು
ಮೃಡ, ನಿಮ್ಮನನುದಿನ ನೆನೆಯಲೀಯದು
ಎನ್ನೊಡೆಯ ಕೂಡಲ ಸಂಗಮದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ!
ನಿತ್ಯ ಬದುಕಿನ ಕಣ್ಣಿಗೆ ಕಂಡ ವಸ್ತು ಅರಿವಿಗೆ ತಿಳಿಯುವ ಭಾಷೆ ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ!
ಸಂಸಾರಸಂಗವ ಬಿಡದು ನೋಡೆನ್ನ ಮನವು
ಈ ನಾಯಿತನವ ಮಾಣಿಸು
ಕೂಡಲ ಸಂಗಮದೇವಾ, ನಿಮ್ಮ ಧರ್ಮ!
ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ
ʼಎನ್ನ ಬಿಡು, ತನ್ನ ಬಿಡು’, ಎಂಬುದು ಕಾಯವಿಕಾರ
ʼಎನ್ನ ಬಿಡು, ತನ್ನ ಬಿಡುʼ, ಎಂಬುದು ಮನೋವಿಕಾರ!
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುವುದೆ, ಕೂಡಲ ಸಂಗಮದೇವಾ? ನಿಜ ಸಂಗತಿಗಳು ವಿಶ್ವಗುರು ಬಸವಣ್ಣನವರು ತಿಳಿಸಿದ್ದಾರೆ, ಶ್ರೀ ಮ. ನಿ. ಪ್ರ. ಸ್ವ. ಜ. ಮುರುಘರಾಜೇಂದ್ರಕೋರಣೇಶ್ವರ ಮಹಾಸ್ವಾಮಿಗಳು, ಅಸೂಟಿ ಶ್ರೀ ಫಲಹಾರಶಿವಯೋಗಿಗಳವರ ಜನ್ಮ ತಪೋಭೂಮಿ ಹೊಸಕೇರಿ ಬಸವನಗರ. ಅಂಚೆ, ಮು. ತಿಮ್ಮಾಪುರ. ತಾ. ರಾಮದುರ್ಗ. ಜಿ. ಬೆಳಗಾವಿ.