ಬೆಂಗಳೂರು
ಲಿಂಗಾಯತ ಧರ್ಮದ ಹೋರಾಟಕ್ಕೆ ಸಿದ್ದರಾಮಯ್ಯ ಗಮನಾರ್ಹ ಕೊಡುಗೆ ನೀಡಿದ್ದಾರೆ.
2017-18ರ ಚಳುವಳಿಯ ನಂತರ ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿದ ಹೆಗ್ಗಳಿಕೆ ಅವರದು.
ಅವರು ತೆಗೆದುಕೊಂಡ ಅನೇಕ ಕ್ರಮಗಳಿಂದ ರಾಜ್ಯದಲ್ಲಿ ಬಸವಣ್ಣನವರ ಪ್ರಭಾವ ಮತ್ತಷ್ಟು ಬೆಳೆಯಿತು. ಬಸವಣ್ಣವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಇಡಿಸಿದ್ದು ಕೆಲವು ಉದಾಹರಣೆಗಳಷ್ಟೇ.
ಇದರಿಂದ ಲಿಂಗಾಯತ ಅಸ್ಮಿತೆ ಗಟ್ಟಿಯಾಗಿ, ಲಿಂಗಾಯತ ಹೋರಾಟಕ್ಕೆ ಹುರುಪು ಬಂದಿತು. ಆದರೆ ಇದರ ಜೊತೆಗೆ ಇದು ಕಾಂಗ್ರೆಸ್ ಪ್ರಾಯೋಜಿತ, ಸಿದ್ದರಾಮಯ್ಯ ಪರ ಹೋರಾಟ ಎಂಬ ಅಪಕೀರ್ತಿಯೂ ಅಂಟಿಕೊಂಡಿತು.
ಲಿಂಗಾಯತ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ಈಗ ನಿರ್ಗಮಿಸಿದ್ದಾರೆ.
ಮುಂದಿವೆ ಮುಖ್ಯಮಂತ್ರಿಯಾಗಲು ಸಿದ್ದರಾಗಿರುವ ಡಿ ಕೆ ಶಿವಕುಮಾರ್ ಲಿಂಗಾಯತ ಹೋರಾಟದಲ್ಲಿ ಕಾಂಗ್ರೆಸ್ ತಳೆದ ನಿಲುವಿನ ಬಗ್ಗೆ ಪಂಚಪೀಠಗಳಿಗೆ ಹೋಗಿ ಎರಡು ಬಾರಿ ಕ್ಷಮಾಪಣೆ ಕೇಳಿದ್ದಾರೆ.
ಇವೆಲ್ಲರ ನಡುವೆ ಲಿಂಗಾಯತ ಸಮುದಾಯ ಸಂಘ ಪರಿವಾರದ ಜೊತೆ ವಚನ ದರ್ಶನ, ಕನ್ನೇರಿ ಸ್ವಾಮಿಯ ಹಿಂದುತ್ವ ಸಮಾವೇಶಗಳಂತಹ ಹಲವಾರು ವಿಷಯಗಳಲ್ಲಿ ಉತ್ಕಟವಾದ ಸಂಘರ್ಷ ಸನ್ನಿವೇಶದಲ್ಲಿದೆ.
ಇವೆಲ್ಲಾ ಬಸವ ಸಂಘಟನೆಗಳು ಪರಿಗಣಿಸಬೇಕಾದ ಮುಖ್ಯ ಬೆಳವಣಿಗೆಗಳು. ಇವುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕೇ, ನಮ್ಮ ಮುಂದಿನ ಮಾರ್ಗವನ್ನು ಹೇಗೆ ಕಲ್ಪಿಸಿಕೊಳ್ಳಬೇಕು.
ಈ ವಿಷಯಗಳನ್ನು ಚರ್ಚಿಸಲು ಬಸವ ಮೀಡಿಯಾ/ರೇಡಿಯೋ ಆಯೋಜಿಸಿರುವ ಸರಣಿ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಲಿಂಗಾಯತ ಹೋರಾಟಗಾರರು, ಶರಣ ಚಿಂತಕರು ಭಾಗವಹಿಸಲಿದ್ದಾರೆ. ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ಈ ವಿಷಯಗಳನ್ನು ಚರ್ಚಿಸಲು ಬಸವ ಮೀಡಿಯಾ/ರೇಡಿಯೋ ಸರಣಿ ಗೂಗಲ್ ಮೀಟ್ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರಲ್ಲಿ ಅನೇಕ ಲಿಂಗಾಯತ ಹೋರಾಟಗಾರರು, ಶರಣ ಚಿಂತಕರು ತಮ್ಮ ಆಲೋಚನೆ ಹಂಚಿಕೊಳ್ಳಲಿದ್ದಾರೆ.
ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ಚರ್ಚೆಯ ದಿನಗಳು ಮೇ 30, 31 ಜೂನ್ 1
ಸಮಯ ಸಂಜೆ 8-9

ಧನ್ಯವಾದಗಳು ಸಿದ್ದರಾಮಯ್ಯ ಬಸವ ಮಾರ್ಗದರ್ಶನ ಮಾಡಿ ಲಿಂಗಾಯತ ಜನರಿಗೆ ಇಚ್ಛೆರಿಸಿ ದ್ದಾರೆ ಕೇಂದ್ರದ ಕೆಲಸ ಮಾಡಿಕೊಂಡು ಮುಂದೆ ಸಾಗುವ ಬಸವ ಮಾರ್ಗ ಹಾಕಿ ನಿಮ್ಮ ನಡೆಗೆ ನಮ್ಮ ಬೆಂಬಲ ಜಯ ಬಸವ ಜಯ ಲಿಂಗಾಯತ 👏🏻👏🏻
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರಿಗೆ ಲಿಂಗಾಯತ ಧರ್ಮದ ಎಲ್ಲರೂ ಚಿರ ಋಣಿ ಗಳು. ಲಿಂಗಾಯತದ ಮುಖಂಡರು ಅಂತ ಅನ್ನಿಸಿಕೊಂಡವರು ಮಾಡಲು ಸಾಧ್ಯವೇ ಆಗದಂತ ಕೆಲಸ ಮಾಡಿದ್ದಾರೆ.
ನಾನು ಲಿಂಗಾಯತ ಅಂತ ಲಿಂಗಾಯತರೇ ಎದೆ ತಟ್ಟಿ ಹೇಳಲು ಹಿಂಜರಿಕೆ ಇರುವ ಕಾಲಘಟ್ಟದಲ್ಲಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರು ನಾನು ಲಿಂಗಾಯತ ಧರ್ಮದ , ಬಸವಣ್ಣ ಮತ್ತು ಶರಣರ ಅಭಿಮಾನಿ ಅಂತ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ.
ಲಿಂಗಾಯತ ಮಠಾಧೀಶರು ಮತ್ತು ಮುಖಂಡರು ಯಾಕೆ ಇನ್ನೂ ಒಂದು ಸ್ಟೇಟ್ಮೆಂಟ್ ಕೊಟ್ಟಿಲ್ಲ ? ಮತ್ತೊಮ್ಮೆ ಧನ್ಯವಾದಗಳು ಸಿದ್ಧರಾಮಯ್ಯ ಸರ್ ರವರಿಗೆ
ಈ ಕನೇರಿ ಸ್ವಾಮಿಗೆ ಉಚ್ಚನ್ಯಾಯಾಲಯದ ವರದಿಯನ್ನು ಉಲ್ಲೇಖಿಸಿ ಅವನ ನಚ ಕಾರ್ಯಕ್ಕೆ ತಡೆನೀಡುವಂತೆ ನ್ಯಾಯಾಲಯದಿಂದ ತಡೆಯೋಕೆ ಆಜ್ಞೆ ಯನ್ನು ತರಬೇಕು.