‘ಬಸವ ಸಂಘಟನೆಗಳು ಬೂತ್ ಮಟ್ಟದಲ್ಲಿ ಲಿಂಗಾಯತ ಮತಗಳ ಮೇಲೆ ಪ್ರಭಾವ ಬೀರಬೇಕು.’
ಗದಗ
ನಗರದಲ್ಲಿ ನಡೆದ ಎರಡು ದಿನಗಳ ಬಸವ ಶಕ್ತಿ ಶಿಬಿರಗಳಲ್ಲಿ ಲಿಂಗಾಯತ ಧರ್ಮಕ್ಕಿರುವ ರಾಜಕೀಯ ವಿರೋಧವನ್ನು ಮಣಿಸುವ ಬಗ್ಗೆ ಗಂಭೀರ ಚರ್ಚೆಯಾಯಿತು.
ಲಿಂಗಾಯತ ಕೋಟದಲ್ಲಿ ಟಿಕೆಟ್ ಪಡೆದು, ಲಿಂಗಾಯತ ಮತಗಳನ್ನು ಪಡೆದು, ಲಿಂಗಾಯತರನ್ನು ವಿರೋಧಿಸುವ ರಾಜಕಾರಣಿಗಳ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ಸಂಘ ಪರಿವಾರದಿಂದ ಒತ್ತಡ ಬರುತ್ತದೆ ಎಂದು ಹೇಳಿ ಅನೇಕ ರಾಜಕಾರಣಿಗಳು ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ಬರುತ್ತಿದ್ದಾರೆ. ನಮ್ಮ ಕಡೆಯಿಂದಲೂ ಅವರ ಮೇಲೆ ಒತ್ತಡ ಹೇರುವ ಕೆಲಸ ಶುರುವಾಗಬೇಕು. ಪಕ್ಷಗಳ, ರಾಜಕಾರಣಿಗಳ ಮೇಲೆ ಒತ್ತಡ ತರಬೇಕಾದರೆ ಬಸವ ಸಂಘಟನೆಗಳು ಬೂತ್ ಮಟ್ಟದಲ್ಲಿ ಲಿಂಗಾಯತ ಮತಗಳ ಮೇಲೆ ಪ್ರಭಾವ ಬೀರಬೇಕೆಂಬ ಅಭಿಪ್ರಾಯ ಕೇಳಿಬಂತು .
ಲಿಂಗಾಯತ ಮಾನ್ಯತೆ ಹೋರಾಟ ವೇದಿಕೆಯ ಚಿಂತಾಮಣಿ ಸಿಂಧಗಿ ಎಂಎಲ್ಎಗಳ ಕುರ್ಚಿ ಕುರ್ಚಿ ಅಲುಗಾಡಿಸುವ ತನಕ ನಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಾವು ಮತ ಹಾಕುವುದಿಲ್ಲ ಅಂತ ಗೊತ್ತಾದರೆ ಅವರೇ ದಾರಿಗೆ ಬರುತ್ತಾರೆ, ಎಂದು ಹೇಳಿದರು.

“ಒಂದು ವೋಟು ಬಿದ್ದರೂ ಚಿಂತೆಯಿಲ್ಲ, ಬಸವ ಸಂಘಟನೆಗಳ ಕಡೆಯಿಂದ ಚುನಾವಣೆಗೆ ನಿಲ್ಲೋಣ. ಪಕ್ಷಗಳ, ಅಭ್ಯರ್ಥಿಗಳ ಮೇಲೆ ಒತ್ತಡ ಬರುತ್ತದೆ. ಪಕ್ಷಗಳ ಪ್ರಣಾಳಿಕೆಗಳು ಲಿಂಗಾಯತ ಧರ್ಮಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು,” ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ ಬರಗುಂಡಿ, “ಗದಗದಲ್ಲಿ 4,000 ಬಸವ ತತ್ವದ ಮತಗಳಿವೆ, ಇವುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಇವರು ಜಾಗೃತರಾದರೆ ಮಿಕ್ಕ ಲಿಂಗಾಯತರ ಮತಗಳ ಮೇಲೂ ಪರಿಣಾಮ ಬೀರುತ್ತದೆ. ಇವರ ಜೊತೆ ಕಾರ್ಮಿಕ, ಶೋಷಿತ ವರ್ಗದವರನ್ನೂ ಸೇರಿಸಿಕೊಂಡರೆ ಪ್ರಬಲವಾದ ಶಕ್ತಿಯಾಗಿ ಬೆಳೆಯಬಹುದು,” ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಎ ವೈ ನವಲಗುಂದ ಬೂತ್ ಮಟ್ಟದಲ್ಲಿ ನಮ್ಮ ಪ್ರಭಾವ ಬೆಳೆಸಿಕೊಂಡರೆ ಮಾತ್ರ ನಾವು ಪಕ್ಷಗಳ, ರಾಜಕಾರಣಿಗಳ ಮೇಲೆ ಹಿಡಿತ ಸಾಧಿಸಬಹುದು. ಒಂದು ಸಾವಿರ, ಎರಡು ಸಾವಿರ ಮತಗಳನ್ನು ಒಗ್ಗೂಡಿಸಿದರೂ ನಮ್ಮ ಮಾತಿಗೆ ಬೆಲೆ ಬರುತ್ತದೆ, ಎಂದರು.
ಲಡಾಯಿ ಪ್ರಕಾಶನದ ಬಸು ಸೂಳಿಬಾವಿ, “ಪ್ರತಿ ಕ್ಷೇತ್ರದಲ್ಲೂ ಬಸವತತ್ವ ರಕ್ಷಣೆಗೆ 5,000 ಲಿಂಗಾಯತರ ಪಡೆ ಕಟ್ಟಬೇಕು. ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಬಂದುತ್ವ ವೇದಿಕೆ, ದಲಿತ ಸಂಘಟನೆಗಳ ಜೊತೆ ಕೈ ಜೋಡಿಸಿದರೆ ಬಸವ ಸಂಘಟನೆಗಳು ಮತ್ತಷ್ಟು ಬಲಿಷ್ಠವಾಗುತ್ತವೆ,” ಎಂದು ಹೇಳಿದರು.
ಬಸವ ಸಂಘಟನೆಗಳು ಅಧಿಕಾರದ ಬದಲು ಮೌಲ್ಯಾಧಾರಿತ ರಾಜಕಾರಣ ಮಾಡಿ ತೋರಿಸಬೇಕೆಂದು ನ್ಯಾಯವಾದಿ ಮಲ್ಲಿಕಾರ್ಜುನ ಹಡಪದ ಕರೆ ಕೊಟ್ಟರು.
“ತಮಿಳುನಾಡಿನಲ್ಲಿ ಪೆರಿಯಾರ್ ಆಧಾರಿತ ರಾಜಕಾರಣ ಬೆಳೆದಿರುವಂತೆ, ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಆಧಾರಿತ ರಾಜಕಾರಣ ಬೆಳೆಯಬೇಕು,” ಎಂದು ಹೇಳಿದರು.
ರಾಜಕೀಯ ಚಿಂತನೆ ಬಸವ ಸಂಘಟನೆಗಳಲ್ಲಿ ತಡವಾಗಿ ಮೂಡುತ್ತಿದೆ, ಇನ್ನು ವಿಳಂಬಮಾಡದೆ ಸಕ್ರಿಯರಾಗಬೇಕೆಂಬ ಅಭಿಪ್ರಾಯವನ್ನು ಹಲವರು ಹಂಚಿಕೊಂಡರು.
“ಚುನಾವಣೆಯಲ್ಲಿ ನಮ್ಮನ್ನು ಎದುರು ಹಾಕಿಕೊಂಡರೆ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಿಸಬೇಕು. 2028ರ ಚುನಾವಣೆಗೆ ನಾವು ಸಜ್ಜಾಗಬೇಕು,” ಎಂದು ಬಸವ ಮೀಡಿಯಾ ಛೇರ್ಮನ್ ಟಿ ಆರ್ ಚಂದ್ರಶೇಖರ್ ಹೇಳಿದರು.

ಮೊದಲು ಲಿಂಗಾಯತರು ಸಂಘಟಿತರ ಆಗಬೇಕು.
ಲಿಂಗಾಯತ ಧರ್ಮದಿಂದ ದೂರ ಸರಿದಿದ್ದ ಹಡಪದ, ಹೂಗಾರ, ಅಗಸ, ಮಡಿವಾಳ, ಗಾಣಿಗ, ಸಜ್ಜನ, ಸಾಧುರು, ಪಂಚಮಸಾಲಿ, ಜಂಗಮರು, ನೊಣಬರು, ಶೆಟ್ಟರು, ಹೀಗೆ ಅನೇಕ ಒಳಪಂಗಡಗಳು ಒಟ್ಟುಗುಡಿಸಬೇಕು. ರಾಜಕೀಯ ಪ್ರಜ್ಞ ಮುಡಿಸಬೇಕು