ಹುತ್ತಕ್ಕೆ ಹಾಲು ಎರೆಯುವುದು ಬಸವತತ್ವಕ್ಕೆ ವಿರುದ್ಧ: ಭಾಲ್ಕಿ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಬಸವ ಪಂಚಮಿ ಹಾಗೂ ಶರಣೆ ಅಕ್ಕನಾಗಮ್ಮ ಅವರ ಜಯಂತಿ ಕಾರ್ಯಕ್ರಮ ನಡೆಯಿತು.

ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯ ವಹಿಸಿ ಮಾತನಾಡುತ್ತ, ನಾಗರ ಪಂಚಮಿಯ ದಿನದಂದು ಕಲ್ಲಿನ ನಾಗರಕ್ಕೆ ಹಾಗೂ ಹುತ್ತಕ್ಕೆ ಹಾಲು ಎರೆಯಲಾಗುವುದು. ದಯೆಯೇ ಧರ್ಮದ ಮೂಲ ಎಂದು ಸಾರಿದ ಬಸವಣ್ಣನವರ ತತ್ವಗಳಿಗೆ ಇದು ವಿರುದ್ಧವಾಗಿದೆ.

ಅಮೂಲ್ಯವಾದ ಹಾಲನ್ನು ವ್ಯರ್ಥ ಮಾಡುವ ಬದಲು ಅದನ್ನು ನಿರ್ಗತಿಕರಿಗೆ ಅಥವಾ ಹಸಿದ ಮಕ್ಕಳಿಗೆ ನೀಡುವುದು ನಿಜವಾದ ಭಕ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಶರಣೆಯರು ಬಸವ ಪಂಚಮಿ ನಿಮಿತ್ಯವಾಗಿ ಶ್ರೀಮಠದ ಮಕ್ಕಳಿಗೆ ಹಾಲು ತಂದಿರುವುದು ನಮಗೆ ಅತ್ಯಂತ ಸಂತೋಷವಾಗಿದೆ.

ಬಸವಣ್ಣನವರ ಬಾಲ್ಯದ ದಿನಗಳಿಂದ ಹಿಡಿದು ಕಲ್ಯಾಣದ ಕ್ರಾಂತಿಯವರೆಗೆ ಪ್ರತಿಯೊಂದು ಸಾಮಾಜಿಕ ಹೋರಾಟಗಳಿಗೂ ಅಕ್ಕನಾಗಮ್ಮ ಬೆನ್ನೆಲುಬಾಗಿ ನಿಂತಿದ್ದರು. ಬಸವಣ್ಣನವರ ವ್ಯಕ್ತಿತ್ವ ರೂಪಿಸುವಲ್ಲಿ ಇವರ ಪಾತ್ರ ದೊಡ್ಡದಾಗಿತ್ತು.

ಕಲ್ಯಾಣ ಕ್ರಾಂತಿಯ ಭೀಕರ ಸಂದರ್ಭದಲ್ಲಿ ಬಿಜ್ಜಳನ ಸೈನಿಕರು ವಚನ ಸಾಹಿತ್ಯವನ್ನು ನಾಶ ಮಾಡಲು ಯತ್ನಿಸಿದಾಗ, ಅಕ್ಕನಾಗಮ್ಮ ಶರಣರ ಪಡೆಯನ್ನು ಮುನ್ನಡೆಸಿ, ತಾವು ಹೆತ್ತ ಮಗ ಚನ್ನಬಸವಣ್ಣ ಹಾಗೂ ಮಡಿವಾಳ ಮಾಚಿದೇವರ ಜೊತೆಗೂಡಿ ವಚನ ಭಂಡಾರವನ್ನು ಕಲ್ಯಾಣದಿಂದ ಸುರಕ್ಷಿತವಾಗಿ ಉಳವಿ ತಲುಪಿಸುವಲ್ಲಿ ಅಕ್ಕನಾಗಮ್ಮನ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.

ಶಾರದಾಬಾಯಿ ಕರಕಾಳೆ ರೇಖಾಬಾಯಿ ಅಷ್ಟೂರೆ, ಮಲ್ಲಮ್ಮ ಪಾಟೀಲ, ಮಲ್ಲಮ್ಮ ನಾಗನಕೇರೆ, ಕರುಣಾ ಕಮಠಾಣೆ, ಮನಿಷಾ ವಾಲೆ ಹಾಗೂ ಭಾಲ್ಕಿ ಪಟ್ಟಣದ ನೂರಾರು ಶರಣೆಯರು ಶ್ರೀಮಠದ ಮಕ್ಕಳಿಗೆ ಹಾಲು ಕುಡಿಸಿ, ಬಸವಪಂಚಮಿ ಸಂಭ್ರಮದಿಂದ ಆಚರಿಸಿದರು.

ಸಂಗಮೇಶ ವಾಲೆ ಹಾಗೂ ನೂರಂದಪ್ಪ ಬಾಳೂರೆ ಅವರು ಮಕ್ಕಳಿಗಾಗಿ ಹಾಲು ದಾಸೋಹ ನೀಡಿದರು.

ಚೇತನ ಸುನೀಲ ಹೊನ್ನಾಳೆ ಅವರಿಂದ ವಚನ ಗಾಯನ ನಡೆಯಿತು. ಇದೇ ಸಂದರ್ಭದಲ್ಲಿ ಸಮಿತ ಅವರ 14ನೆಯ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments
  • Every problem only one solution is linga puja,
    Please practice on daily basis 15 minutes every day.
    The changes you will get by yourself only.

Leave a Reply

Your email address will not be published. Required fields are marked *