ಹುಬ್ಬಳ್ಳಿ:
ನಗರದ ಅಕ್ಷಯ್ ಕಾಲೋನಿಯ ‘ಮಹಾಶರಣೆ ಗಂಗಾಂಬಿಕಾ ಬಳಗ’ದ ವತಿಯಿಂದ ವಿಶ್ವಗುರು ಬಸವಣ್ಣನವರ ಹಾಗೂ ಜಗನ್ಮಾತೆ ಅಕ್ಕಮಹಾದೇವಿ ಅವರ ಜಯಂತಿಯನ್ನು ಈಚೆಗೆ ಸಂಭ್ರಮದಿಂದ ಆಚರಿಸಲಾಯಿತು.
ಉದಾಯೋನ್ಮುಖ ಹಿಂದೂಸ್ತಾನಿ ಸಂಗೀತ ಕಲಾವಿದೆ ಹಾಗೂ ಕರ್ನಾಟಕ ಕಾಲೇಜು ಧಾರವಾಡದ ವಿದ್ಯಾರ್ಥಿನಿ ಕು. ಶಿವಾನಿ ಕವಟೆಕರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಶಿವಾನಿ ಅವರು ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ, ಅಲ್ಲಮಪ್ರಭು, ಅಕ್ಕ ಅವರ ವಚನಗಳನ್ನು ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಡಿದರು. ಹಾಗೂ ಕಿರಣಾ ಘರಾಣಾ ಪರಂಪರೆಯ ಪೂರಿಯಾ ಧನಾಶ್ರೀ ರಾಗದಿಂದ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟು ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಭಾವಿ ಲೇಖಕಿ ಶಾಂತಾ ಕೆ. ಬಸವರಾಜ ವಹಿಸಿದ್ದರು.
ಆರಂಭದಲ್ಲಿ ಪ್ರಾರ್ಥನೆ ಮಾಡಿ, ಸ್ವಾಗತಿಸಿದ ದಾಕ್ಷಾಯಣಿ ಕೋಳಿವಾಡ ಅವರು ಅತಿಥಿಗಳನ್ನು ಪರಿಚಯಿಸಿದರು. ಬಳಗದ ಸಂಚಾಲಕರಾದ ಡಾ. ಸ್ನೇಹಾ ಭೂಸನೂರ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಶರಣರು ಸಂಗೀತಕ್ಕೆ ಕೊಟ್ಟ ಪ್ರಾಧಾನ್ಯತೆಯನ್ನು ವಿವರಿಸಿದರು. ಬಸವಣ್ಣ, ಅಕ್ಕಮಹಾದೇವಿ ಜಯಂತಿ ಕುರಿತು ಮಾತನಾಡಿದರು.

ಶಶಿಕಲಾ ಕೊಡೇಕಲ್ಲ ಅವರಿಂದ ಶರಣು ಸಮರ್ಪಣೆ ನಡೆಯಿತು. ಗೀತಾ ಸಾಲಿಮಠ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಆಶಾ ಕವಳಿ, ಗೀತಾ ತೆಂಗಿನಕಾಯಿ, ಸುಧಾ ಗಂಜಿ, ಶೈಲಾ ಹುಲಮನಿ, ಸುಶೀಲಮ್ಮ ಬಣಕಾರ, ಶೋಭಾ ದೇಸಾಯಿ, ಮಮತಾ ಶೆಟ್ಟರ, ಸರೋಜಾ ಮೇಟಿ, ಸುನೀತಾ ಹುಬ್ಳಿಕರ, ಬಸಮ್ಮ ಕೋಟಿ, ಸೀಮಾ, ಸುಮಾ, ಗೀತಾ, ಶಾಂತಾ, ಗಂಗಾ, ಪಾರ್ವತಿ, ಅನುಪಮಾ, ಶಾರದಾ, ರತ್ನಾ, ರೇಖಾ, ವೀಣಾ, ಲಕ್ಷ್ಮಿ, ಸುಷ್ಮಾ, ಶಿಲ್ಪಾ, ಅಶ್ವಿನಿ, ಡಾ. ಪ್ರಕಾಶ ಮುನ್ನೊಳಿ, ಶ್ರೀಶೈಲ ವಾಲಿ, ವಿರೂಪಾಕ್ಷ ಭೂಸನೂರ, ಅಪ್ಪಾಸಾಬ ಸಿಂದಗಿ, ಶಶಿಧರ ನಾರಾ, ಡಾ. ಕುಬಸದ, ರವೀಂದ್ರ ಕವಟೇಕರ, ಡಾ. ಸುರೇಶ ಹೊರಕೇರಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ವಚನ ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
